Saturday, January 16, 2021

Latest Posts

ಬೆಳಗಾವಿ| ಮುಂಗಾರು ಮಳೆಯಿಂದ ತುಂಬಿ ಹರಿಯುತ್ತಿವೆ ಜಿಲ್ಲೆಯ ಬಹುತೇಕ ನದಿಗಳು!

ಬೆಳಗಾವಿ: ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಕಳೆದ ಮೂರ‌್ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮುಂಗಾರು ಮಳೆಯಿಂದ ಜಿಲ್ಲೆಯ ಬಹುತೇಕ ನದಿಗಳು ತುಂಬಿ ಹರಿಯುತ್ತಿವೆ.
ಮಂಗಳವಾರ ರಾತ್ರಿಯಿಡಿ ಹಾಗೂ ಬುಧವಾರ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಕಾಲುವೆ, ನದಿ, ಹಳ್ಳ, ಕೊಳ್ಳಗಳಲ್ಲಿ ನೀರು ಹರಿಯುತ್ತಿದ್ದು, ನದಿ ತೀರದ ಜನರಲ್ಲಿ ಆತಂಕ ಎದುರಾಗಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಕೃಷ್ಣಾ, ದೂಧಗಂಗಾ, ವೇದಗಂಗಾ, ಹಿರಣ್ಯಕೇಶಿ, ಮಾರ್ಕೇಂಡಯೆ ನದಿಗಳಲ್ಲಿ ಪಡಲು ತುಂಬಿ ನೀರು ಹರಿದು ಬರುತ್ತಿದೆ. ಜಲಾಶಯಗಳಲ್ಲಿ, ಕೆರೆ ಕಟ್ಟೆಗಳಲ್ಲಿ ನೀರಿನ ಮಟ್ಟದಲ್ಲಿ  ದಿನದಿಂದ ದಿನಕ್ಕೆ ಏರಿಕೆಯಾಗಿದೆ.  ಮಹಾರಾಷ್ಟ್ರದ ವರುಣಾ, ರಾಧಾನಗರ, ಕೊಯ್ನಾ, ಕಾಳಮ್ಮವಾಡಿ ಹಾಗೂ ಮಹಾಬಳೇಶ್ವರ ಸೇರಿದಂತೆ ವಿವಿಧ ಭಾಗಗಳಿಂದ ಮಳೆಯಾಗಿ ರಾಜಾಪೂರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ  ಹಾಗೂ ಚಿಕಲಿ ಬ್ಯಾರೇಜ್‌ದಿಂದ ದೂಧಗಂಗಾ ಮತ್ತು ವೇದಗಂಗಾ ನದಿಗೆ ನೀರು ಮಹಾದಿಂದ ಹರಿದು ಬರುತ್ತಿದೆ.
ಜಿಟಿ ಜಿಟಿ ಮಳೆಯಿಂದಾಗಿ ನಗರದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಲ್ಲಿ ನೀರು ತುಂಬಿದ್ದರಿಂದ ವಾಹನ ಸವಾರರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ರಸ್ತೆ ಬದಿಯಲ್ಲಿ ಹಣ್ಣು, ತರಕಾರಿ, ಹೂ, ಬಟ್ಟೆ, ದಿನಸಿ ಪದಾರ್ಥಗಳನ್ನು, ಚಪ್ಪಲಿ ಸೇರಿದಂತೆ ಇನ್ನೀತರ ವ್ಯಾಪಾರ ವಹಿವಾಟು ನಡೆಸುತ್ತಿದ್ದ ವ್ಯಾಪಾರಿಗಳು ತೀವ್ರ ಸಮಸ್ಯೆ ಎದುರಿಸಿದರು. ಅಲ್ಲದೇ ಸತತವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ಸಾರ್ವಜನಿಕರು ಮನೆಯಿಂದ ಹೊರಗೆ ಬರದೆ ಬೆಚ್ಚನೆ ಮನೆಯಲ್ಲಿದ್ದರು. ಇದರಿಂದಾಗಿ ಬೀದಿಗಳಲ್ಲಿ ಜನರು ವಿರಳವಾಗಿ ಕಾಣುತ್ತಿದ್ದರು.  ಅಲ್ಲದೇ  ಬೆಳಗಾವಿ ತಾಲೂಕಿನಲ್ಲಿ  ಬಹುತೇಕ ಗದ್ದೆಗಳು ನೀರಿನಿಂದ ತುಂಬಿದ್ದವು. ಇದರಿಂದಾಗಿ ಸಾಲ ಮಾಡಿ ಬೆಳೆದ ಬೆಳೆಗಳು ನೀರು ಪಾಲಾಗಿರುವುದರಿಂದ ರೈತರು ತೀವ್ರ ನಷ್ಟವನ್ನು ಅನುಭವಿಸುವಂತಾಗಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!