Sunday, August 14, 2022

Latest Posts

ಬೆಳಗಾವಿ: ಮುಂಬೈನಿಂದ ಬೆಳಗಾವಿಗೆ ಬಂದ ಗರ್ಭಿಣಿಗೆ ಕೊರೋನಾ ಸೋಂಕು ದೃಢ

ಬೆಳಗಾವಿ: ಇತ್ತಿಚೆಗೆ ಮುಂಬೈನಿಂದ ಬೆಳಗಾವಿಗೆ ಆಗಮಿಸಿದ್ದ 27 ವರ್ಷದ ಗರ್ಭಿಣಿ ಮಹಿಳೆಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 108 ಕ್ಕೆ ಏರಿಕೆಯಾಗಿದೆ.

ಕೆಲ ದಿನಗಳ ಹಿಂದೆ ಬೆಳಗಾವಿಯ ಸದಾಶಿವ ನಗರದ ಈ ಗರ್ಭಿಣಿ ಮಹಿಳೆ ಮುಂಬೈಗೆ ಹೋಗಿದ್ದರು. ಬಳಿಕ ಇತ್ತೀಚೆಗೆ ಬೆಳಗಾವಿಗೆ ಆಗಮಿಸಿದ್ದ ಈ ಗರ್ಭಿಣಿ ಮಹಿಳೆ ಬಿಮ್ಸ್ ನಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡಿದ್ದರು. ಗುರುವಾರ ಆರೋಗ್ಯ ಇಲಾಖೆಯ ಬುಲಟೆನ್ ದಲ್ಲಿ ಈ ಮಹಿಳೆಗೆ ಸೋಂಕು ದೃಢಪಟ್ಟ ವರದಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss