Thursday, August 18, 2022

Latest Posts

ಬೆಳಗಾವಿ| 13 ಜನರಲ್ಲಿ ಸೋಂಕು ದೃಢ: ಸೋಂಕಿತರ ಸಂಖ್ಯೆ 141ಕ್ಕೆ ಏರಿಕೆ

ಬೆಳಗಾವಿ: ಮಹಾಮಾರಿ ಕೊರೋನಾ ವೈರಸ್ ನ ಅಟ್ಟಹಾಸ ಜಿಲ್ಲೆಯಲ್ಲಿ ಮಂಗಳವಾರ ಅಬ್ವರಿಸಿದ್ದು, 17 ವರ್ಷದ ಹೆಣ್ಣು ಮಗು ಸೇರಿದಂತೆ 13 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ.

ಮಂಗಳವಾರ ಆರೋಗ್ಯ ಇಲಾಖೆಯು ಬಿಡುಗಡೆ ಮಾಡಿರುವ ಬುಲಟೆನ್ ದಲ್ಲಿ 13 ಜನರಿಗೆ ಸೋಂಕು ತಗುಲಿದ ವರದಿಯಾಗಿದೆ. ಈ ಹಿಂದೆ ರಾಜಸ್ಥಾನ ಹಾಗೂ ತಬ್ಲಿಘಗಳ ಕಾಟ ಅನುಭವಿಸಿದ ಜಿಲ್ಲೆಯಲ್ಲಿ ಇಂದು ಜಾರ್ಖಂಡ್ ನಂಜು ವಕ್ಕರಿಸಿದೆ.

ಜಾರ್ಖಂಡ್ ರಾಜ್ಯದ ಶ್ರೀಕ್ಷೇತ್ರ ಶಿಖರಜಿ ಕ್ಷೇತ್ರಕ್ಕೆ ಭೇಟಿ ನೀಡಿರುವ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇವರು ಅಥಣಿ ಹಾಗೂ ಕಾಗವಾಡ ತಾಲೂಕಿನವರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!