ಬೆಳಗಾವಿ : ಜಗತ್ತನ್ನೇ ನಲಗಿಸಿರುವ ಕೊರೋನಾ ಮೃತ್ಯು ಮೃದಂಗ ಶನಿವಾರ ಮುಂದುವರೆದಿದೆ. ಜಿಲ್ಲೆಯಲ್ಲಿ 3 ಜನರು ಸಾವನಪ್ಪಿದ್ದು, 276 ಜನರಲ್ಲಿ ಸೋಂಕು ವಕ್ಕರಿಸಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 11719 ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ ಸೋಂಕಿತ 11719 ಜನರಲ್ಲಿ ಶನಿವಾರ ಆಸ್ಪತ್ರೆಯಿಂದ 536 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಯಾಗಿದ್ದು, ಒಟ್ಟು 7870 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಇದುವರೆಗೆ ಬಿಡುಗಡೆಯಾಗಿದ್ದಾರೆ. 180 ಜನರು ಇದುವರೆಗೆ ಮಹಾಮಾರಿ ಕೊರೋನಾ ಅಟ್ಟಹಾಸಕ್ಕೆ ಬಲಿಯಾಗಿದ್ದು, 3669 ಜನರಲ್ಲಿ ಸೋಂಕು ಸಕ್ರಿಯವಾಗಿದೆ.