Sunday, April 11, 2021

Latest Posts

ಬೆಳಗಿನ ತಿಂಡಿ ಸ್ಕಿಪ್ ಮಾಡುವ ಅಭ್ಯಾಸ ಇದೆಯೇ?ನೀವು ಯಾವೆಲ್ಲ ರೋಗಗಳಿಗೆ ಆಹ್ವಾನ ನೀಡುತ್ತಿದ್ದೀರಿ ಇಲ್ಲಿ ನೋಡಿ..

ಬಿಸಿ ಬಿಸಿ ತಿಂಡಿ ಟೇಬಲ್ ಮೇಲೆ ರೆಡಿ ಇದ್ದರೂ ತಿನ್ನುವಷ್ಟು ವ್ಯವಧಾನ ಕೆಲವರಿಗೆ ಇರುವುದಿಲ್ಲ. ಇನ್ನು ಹಲವರಿಗೆ ತಿಂಡಿ ಮಾಡಲು ಸಮಯವಿರುವುದಿಲ್ಲ. ಹರಿಬಿರಿ ಮಾಡಿಕೊಂಡು ಬ್ಯಾಗ್ ನೇತಾಕಿಕೊಂಡು, ನಾನು ಆಫೀಸ್ ನಲ್ಲೇ ತಿನ್ನುತ್ತೇನೆ ಎಂದು ಹೊರಡುತ್ತಾರೆ. ಆದರೆ ಇನ್ನೇನೊ ಕೆಲಸ ಬಂದು ತಿಂಡಿ ತಿನ್ನುವ ಸಮಯ ಕಳೆದುಹೋಗುತ್ತದೆ. ಇದರಿಂದ ಆರೋಗ್ಯಕ್ಕೆ ಸಾಕಷ್ಟು ತೊಂದರೆಗಳು ಕಾಡಬಹುದು.
ಹೃದಯಾಘಾತ : ಜಾಮಾ ಅಧ್ಯಯನದ ಪ್ರಕಾರ, ಬೆಳಗಿನ ಉಪಹಾರವನ್ನು ತ್ಯಜಿಸುವ ಪುರುಷರಲ್ಲಿ ಹೃದಯಾಘಾತದ ಸಾಧ್ಯತೆ ಶೇ.27ಕ್ಕಿಂತ ಹೆಚ್ಚಿರುತ್ತದೆ. ನೀವು ಆರೋಗ್ಯಕರವಾದ ಉಪಹಾರ ಸೇವಿಸಿದರೆ ಹೃದಯಾಘಾತದ ಅಪಾಯ ತಡೆಯಬಹುದು.
ರಕ್ತದೊತ್ತಡ: ಬೆಳಗಿನ ಉಪಾಹಾರವನ್ನು ತ್ಯಜಿಸಿದರೆ ಜನರು ಅಧಿಕ ರಕ್ತದೊತ್ತಡಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ಇದು ಅಪಧಮನಿಗಳ ಅಡಚಣೆಗೆ ಕಾರಣವಾಗುತ್ತದೆ. ಮತ್ತೊಂದೆಡೆ, ಪಾರ್ಶ್ವ ವಾಯು ಸೇರಿದಂತೆ ಇತರ ಹೃದಯ ಕಾಯಿಲೆಗಳ ಅಪಾಯವನ್ನು ಹೆಚ್ಚು ಮಾಡುತ್ತದೆ ಎಂಬ ಅಂಶವನ್ನು ಬಹಿರಂಗಪಡಿಸಿದ್ದಾರೆ.
ಕೂದಲು ಉದುರುತ್ತದೆ: ಬೆಳಗಿನ ಸಮಯ ಉಪಹಾರ ತ್ಯಜಿಸುವುದರಿಂದ ಆಗುವ ಅಡ್ಡಪರಿಣಾಮವೆಂದರೆ ಕೂದಲು ಉದುರುವುದು. ಇದು ಕೂದಲಿನ ಬೆಳವಣಿಗೆಯನ್ನು ತಪ್ಪಿಸಿ, ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ನಿಮಗೆ ಗೊತ್ತಿದೆಯೋ, ಇಲ್ಲವೋ ನೀವು ಬೆಳಗಿನ ಸಮಯ ಉಪಹಾರ ಸೇವಿಸುವುದರಿಂದ ಕೂದಲು ಕಿರುಚೀಲಗಳ ಬೆಳವಣಿಗೆಗೆ ಸಹಾಯವಾಗುತ್ತದೆ. ನೀವು ನಿಜಕ್ಕೂ ಸೊಂಪಾದ ಕೂದಲನ್ನು ಬಯಸಿದ್ದರೆ ಪ್ರತಿದಿನ ಪ್ರೊಟೀನ್ ಭರಿತ ಉಪಹಾರ ಸೇವಿಸಿ.
ಮಹಿಳೆಯರಿಗೆ ಮಧುಮೇಹ: ಉಪಹಾರವನ್ನು ಸೇವಿಸುವ ಮಹಿಳೆಯರಿಗಿಂತ, ಉಪಹಾರವನ್ನು ತ್ಯಜಿಸುವ ಅಭ್ಯಾಸವನ್ನು ಹೊಂದಿರುವ ಮಹಿಳೆಯರಿಗೆ ಟೈಪ್ -2 ಮಧುಮೇಹ ಬರುವ ಅಪಾಯ ಹೆಚ್ಚು. ಬೆಳಗ್ಗೆ ತಿಂಡಿ ತಿನ್ನುವುದನ್ನು ಬಿಟ್ಟು ಕೆಲಸಕ್ಕೆ ಹೊರಡುವ ವರ್ಕಿಂಗ್ ವುಮನ್ಸ್ ಗೆ ಟೈಪ್ 2 ಮಧುಮೇಹ ಬರುವ ಸಾಧ್ಯತೆ ಶೇ.54 ಕ್ಕಿಂತ ಹೆಚ್ಚಿರುತ್ತದೆ.
ತೂಕ ಹೆಚ್ಚಾಗುತ್ತದೆ: ನೀವು ಒಂದು ಕಡೆ ತೂಕ ಇಳಿಸುವ ಪ್ಲಾನ್ ಮಾಡಿಕೊಂಡು, ಮತ್ತೊಂದೆಡೆ ಬೆಳಗಿನ ಉಪಹಾರ ತ್ಯಜಿಸುವ ಅಭ್ಯಾಸ ಹೊಂದಿದ್ದರೆ ಇದನ್ನು ನಿಲ್ಲಿಸಿಬಿಡಿ. ಹಸಿವಿನ ಮಟ್ಟ ಹೆಚ್ಚಾದಷ್ಟೂ ಆಹಾರ ಸೇವನೆಯ ಪ್ರಮಾಣ ಹೆಚ್ಚಾಗುತ್ತದೆ. ತಿಂಡಿ ತ್ಯಜಿಸುವ ನಿರಂತರ ಅಭ್ಯಾಸವು ಅಂತಿಮವಾಗಿ ತೂಕ ಹೆಚ್ಚಾಗಲು ಕಾರಣವಾಗುತ್ತದೆ.
ದೇಹದ ಶಕ್ತಿ ಕುಗ್ಗುವಿಕೆ : ಅಧ್ಯಯನದ ಪ್ರಕಾರ, ಉಪಹಾರವನ್ನು ತ್ಯಜಿಸುವುದರಿಂದ ದೇಹದ ಶಕ್ತಿ ಮತ್ತು ಮನಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss