ಬೆಳಗ್ಗೆ ಚೆನ್ನಾಗಿದ್ದರೆ ದಿನವಿಡೀ ಚೆನ್ನಾಗಿರುತ್ತದೆ.ಬೆಳಗ್ಗೆ ನಾವು ಮಾಡುವ ಕೆಲವು ಕೆಲಸಗಳು ನಮ್ಮ ಮೂಡ್ ಹಾಳು ಮಾಡುತ್ತವೆ. ಮನೆಯವರ ಜೊತೆ ಜಗಳ, ಫೋನ್ ನೋಡುವಾಗ ಯಾವುದಾದರೂ ಕೆಟ್ಟ ವಿಷಯಗಳನ್ನು ನೋಡುವುದು. ಆಫೀಸಿಗೆ ಲೇಟ್ ಆಯಿತು ಎಂಬ ಟೆನ್ಶನ್ ಇದೆಲ್ಲ ಆಗುವುದರಿಂದ ನಿಮ್ಮ ದಿನ ಕೆಟ್ಟದಾಗಿ ಹೋಗುತ್ತದೆ. ಬೆಳಗ್ಗೆ ಈ ಎಂಟು ವಿಷಯಗಳನ್ನು ಗಮನದಲ್ಲಿಟ್ಟರೆ ಇಡೀ ದಿನ ಆನಂದವಾಗಿರುತ್ತದೆ. ಎಲ್ಲಾ ಕೆಲಸಗಳು ಸರಿಯಾಗಿ ಆಗುತ್ತವೆ. ಯಾವ ಕೆಲಸ ನೋಡಿ..
- ಸರಿಯಾದ ಸಮಯಕ್ಕೆ ಏಳುವುದು, ಹಾಗೂ ಎದ್ದ ಮೇಲೆ ಇಡೀ ದಿನವನ್ನು ಪ್ಲಾನ್ ಮಾಡುವುದು.
- ದೇವರ ಪೂಜೆ ಅಥವಾ ಮೆಡಿಟೇಶನ್ ಮಾಡುವುದು
- ಫ್ಯಾಮಿಲಿ ಜೊತೆಗೆ ಒಳ್ಳೆಯ ಸಮಯ ಕಳೆಯಿರಿ, ಕಾಫಿ ಮಾಡಿಕೊಂಡು ತಿನ್ನಿ.
- ಜಿಮ್, ಯೋಗ ಅಥವಾ ವಾಕ್ ಮಾಡಿ, ದೇಹ ದಂಡಿಸಿ.
- ಸರಿಯಾದ ಪೌಷ್ಠಿಕ ಆಹಾರ ಸೇವಿಸಿ. ತಿಂಡಿ ಚೆನ್ನಾಗಿದ್ದರೆ ದಿನ ಖಂಡಿತ ಚೆನ್ನಾಗಿರುತ್ತದೆ.
- ಚೆನ್ನಾಗಿ ನೀರು ಕುಡಿಯಿರಿ. ನಿಮ್ಮ ದೇಹದ ಹೊರಗೆ ಹೇಗೆ ಸ್ನಾನ ಬೇಕೋ, ದೇಹದ ಒಳ ಅಂಗಗಳಿಗೂ ಸ್ನಾನ ಬೇಕು.
- ಮನೆಯಲ್ಲಿಯೇ ಕುಳಿತಿರಬೇಡಿ. ಇರುವ ಸಮಯದಲ್ಲಿ ಹೊರಗೆ ಹೋಗಿ ಬಿಸಿಲಿಗೆ ಕುಳಿತುಕೊಳ್ಳಿ
- ಮನೆಕೆಲಸ ಮಾಡಿ. ನೀವೇ ತಿಂಡಿ ಮಾಡಿಕೊಳ್ಳಿ. ಕೆಲಸ ಮಾಡಿದರೆ ದೇಹ ದಂಡನೆಯಿಂದ ಆಕ್ಟೀವ್ ಆಗುತ್ತೀರಿ.