ನಾವು ಪ್ರತಿದಿನ ನಮ್ಮ ದಿನಚರಿಗಳ ಕುರಿತು ಹೆಚ್ಚು ಗಮನವಹಿಸಿದರೂ ನಾವು ಬೆಳಗ್ಗೆ ಎದ್ದ ಕೂಡಲೇ ಮಾಡುವಂತೆ ಕೆಲಸಗಳು ನಮ್ಮ ಇಡೀ ದಿನದ ಚಟುವಟಿಕೆಗಳಿಗೆ ದುಷ್ಪರಿಣಾಮ ಬೀರುತ್ತದೆ.
ಪ್ರತಿನಿತ್ಯ ಹಾಸಿಗೆಯಿಂದ ಏಳುತ್ತಲೇ ಈ 5 ಕೆಲಸಗಳನ್ನು ಮಾಡಬೇಡಿ. ನೀವು ಇವುಗಳನ್ನು ಮಾಡಿ ನಿಮ್ಮ ಮನಸ್ಸು ಹಾಗೂ ನಿಮ್ಮ ದೇಹಕ್ಕೆ ತೊಂದರೆಯಾಗಲಿದೆ. ಹಾಗಿದ್ದರೆ ಬನ್ನಿ ಬೆಳಗ್ಗೆ ಯಾವೆಲ್ಲಾ ಕೆಲಸಗಳನ್ನು ಮಾಡಬಾರದೆಂದು ತಿಳಿಯೋಣ:
ಮೊಬೈಲ್ ನೋಡಬೇಡಿ: ಮುಮಜಾನೆ ತಂಪಿನ ವಾತಾವರಣದಲ್ಲಿ ಪ್ರಕೃತಿಯನ್ನು ಆನಂದಿಸುವುದರ ಬದಲಿಗೆ ಮೊಬೈಲ್ ನಲ್ಲಿ ಸಾಮಾಜಿಕ ಜಾಲತಾಣ ನೋಡುವುದು ಈಗಿನ ಕಾಲದಲ್ಲಿನವರಿಗೆ ರೂಢಿಯಾಗಿದೆ. ಇದರಿಂದ ನಮ್ಮ ಕಣ್ಣುಗಳಿಗೆ ಹೆಚ್ಚು ಆಯಾಸ ನೀಡಿದಂತಾಗುತ್ತದೆ.
ಜಗಳ ಮಾಡಬೇಡಿ: ಮುಂಜಾನೆ ಹಾಸಿಗೆಯಿಂದ ಏಳುತ್ತಲೇ ಕೆಲವರು ತಮ್ಮವರನ್ನು ಬೈಯುತ್ತಾ ಏಳುತ್ತಾರೆ. ಇದರಿಂದ ತಮ್ಮ ಇಡೀ ದಿನದ ಸಂತೋಷ ಹಾಳಾಗುತ್ತದೆ. ಹಾಗಾಗಿ ನಿತ್ಯ ಬೆಳಗ್ಗೆ ನಗುಮೊಗದಿ ಎದ್ದರೆ ನಿಮ್ಮ ದಿನ ಸುಂದರವಾಗಿರುತ್ತದೆ.
ಕಾಫಿ ಟೀ ಕುಡಿಯಬೇಡಿ: ಬೆಳಗ್ಗೆ ಎದ್ದ ಕೂಡಲೇ ಯಾವತ್ತೂ ಕಾಫೀ ಟೀ ಕುಡಿಯಬೇಡಿ. ಇಡೀ ರಾತ್ರಿ ಹೊಟ್ಟೆಗೆ ಆಹಾರವಿಲ್ಲದೆ ಇರುವ ಕಾರಣ ಕಾಫೀ ಟೀ ಕುಡಿಯುವುದರಿಂದ ಗ್ರಾಸ್ಟ್ರಿಕ್ ಆಗುವ ಸಾಧ್ಯತೆ ಇದೆ. ಹಾಗಾಗಿ ಪ್ರತಿದಿನ ಬೆಳಗ್ಗೆ ಬಿಸಿ ನೀರು ಅಥವಾ ಬಿಸಿ ನೀರಿಗೆ ಲಿಂಬೆ ರಸ ಹಾಕಿ ಕುಡಿಯಿರಿ.
ತಿಂಡಿ ಸ್ಕಿಪ್ ಮಾಡಬೇಡಿ: ಕೆಲಸಕ್ಕೆ ಹೋಗುವ ಅವಸರದಲ್ಲಿ ನಾವು ನಮ್ಮ ಉಪಹಾರ ತಿನ್ನುವುದನ್ನು ಬಿಡುತ್ತೇವೆ. ನಾವು ಹಿಂದಿನ ದಿನ ರಾತ್ರಿ ಆಹಾರ ಬಿಟ್ಟರೆ ಸರಿಸುವಾರು 6-7ಗಂಟೆ ನಮ್ಮ ದೇಹಕ್ಕೆ ಆಹಾರವಿರುವುದಿಲ್ಲ. ಈ ವೇಳೆ ನಮ್ಮ ದೇಹದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗಿ ಆಯಾಸ, ತಲೆ ಸುತ್ತು ಬರುವ ಸಾಧ್ಯತೆ ಇದೆ.
ದೂಮಪಾನ ಬೇಡ: ಕೆಲವರಿಗೆ ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ಒಮ್ಮೆಯಾದರೂ ದೂಮಪಾನ ಮಾಡುವುದು ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಇದರಿಂದ ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶ ಲಭಿಸುವುದಿಲ್ಲ. ಬದಲಿಗೆ ಬಿಸಿ ನೀರು ಹಾಗೂ ಸ್ವಲ್ಪ ಆಹಾರ ಸೇವಿಸಿ ಮುಂದಿನ ಚಟುವಟಿಕೆ ಮಾಡುವುದು ಉತ್ತಮ.