Thursday, August 18, 2022

Latest Posts

ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಇವುಗಳನ್ನ ಕುಡಿದರೆ ರೋಗಗಳು ನಿಮ್ಮ ಬಳಿ ಸುಳಿಯೋದಿಲ್ಲ..

ಬೆಳಗ್ಗೆ ಎದ್ದ ತಕ್ಷಣ ನಾವು ನಮ್ಮ ದಿನವನ್ನು ಹೇಗೆ ಆರಂಭಿಸುತ್ತೇವೆ ಎನ್ನುವುದು ನಮ್ಮ ಇಡೀ ದಿನ ಹೇಗೆ ಇರುತ್ತದೆ ಎನ್ನುವುದನ್ನು ನಿರ್ಧರಿಸುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಗೆ ನಾವು ಏನು ಸೇವಿಸುತ್ತೇವೆ ಎಂಬುದು ಮುಖ್ಯ. ಬೆಳಗ್ಗೆ ಖಾಲಿ ಹೊಟ್ಟೆಗೆ ಏನು ಸೇವಿಸಬೇಕು ಇಲ್ಲ ನೋಡಿ..

  • ಬಿಸಿ ನೀರು ಹಾಗೂ ಜೇನುತುಪ್ಪ: ಜೀರ್ಣಶಕ್ತಿ ಹಾಗೂ ರೋಗನಿರೋಧಕಶಕ್ತಿ ವೃದ್ಧಿಗೆ ಇದು ಸಹಕಾರಿ. ನಿಮ್ಮ ದೇಹದ ಮೆಟಬೊಲಿಸಮ್ ಇಂಪ್ರೂವ್ ಮಾಡಲು ಈ ಡ್ರಿಂಕ್ ಸಹಕಾರಿ. ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಕಲ್ಮಶಗಳೂ ತೊಳೆದುಹೋಗುತ್ತದೆ.
  • ನೆನೆಸಿದ ಬಾದಾಮಿ ನೀರು: ರಾತ್ರಿ ಬಾದಾಮಿಗಳನ್ನು ಚೆನ್ನಾಗಿ ತೊಳೆದು ಕುಡಿಯುವ ನೀರಿನಲ್ಲಿ ನೆನಸಿಡಿ. ಬೆಳಗ್ಗೆ ಖಾಲಿ ಹೊಟ್ಟೆಗೆ ಬಾದಾಮಿಯನ್ನು ತಿಂದು ಬಾದಾಮಿ ನೆನೆಸಿದ ನೀರನ್ನು ಕುಡಿಯಿರಿ. ಇದು ನಿಮ್ಮ ದೇಹಕ್ಕೆ ವಿಟಮಿನ್ಸ್‌ಗಳನ್ನು ನೀಡುತ್ತಿದೆ.
  • ನೆಲ್ಲಿಕಾಯಿ ರಸ: ಫ್ರೆಶ್ ನೆಲ್ಲಿಕಾಯಿ ಜ್ಯೂಸ್ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ಇಮ್ಯುನಿಟಿ ಹೆಚ್ಚುತ್ತದೆ. ಇದನ್ನು ಕುಡಿದ ನಂತರ ಮುಕ್ಕಾಲು ಗಂಟೆವರೆಗೆ ಕಾಫಿ ಅಥವಾ ಟೀ ಕುಡಿಯಬಾರದು. ಅಷ್ಟೇ ಅಲ್ಲದೆ ಆಯುರ್ವೇದದ ಪ್ರಕಾರ ಈ ಜ್ಯೂಸ್ ಪ್ರತಿನಿತ್ಯ ಖಾಲಿಹೊಟ್ಟೆಗೆ ಕುಡಿಯುವುದರಿಂದ ದೀರ್ಘ ಆಯುಷ್ಯ ಸಿಗಲಿದೆ ಎನ್ನಲಾಗುತ್ತದೆ. ಅಷ್ಟೇ ಅಲ್ಲದೆ ಕ್ಲಿಯರ್ ಸ್ಕಿನ್ ಹಾಗೂ ಒಳ್ಳೆಯ ಕೂದಲಿಗೂ ಇದು ಸಹಕಾರಿ.
  • ಪಪಾಯ: ಪಪಾಯ ಜ್ಯೂಸ್ ಅಥವಾ ಪಪಾಯವನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ಇದರಿಂದ ಜೀರ್ಣಕ್ರಿಯೆ ಹೆಚ್ಚಾಗುತ್ತದೆ. ಪಪಾಯ ತಿಂದು ಒಂದು ಗಂಟವರೆಗೆ ಏನನ್ನೂ ತಿನ್ನಬೇಡಿ. ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ.ಅಷ್ಟೇ ಅಲ್ಲದೆ ಹೃದಯ ಸಂಬಂಧಿ ಕಾಯಿಲೆಗಳು ನಿಮ್ಮ ಹತ್ತಿರ ಸುಳಿಯಲಾರದು.
  • ಶಿಯಾ ಸೀಡ್ಸ್: ಇವನ್ನು ತಂಪಿನ ಬೀಜ ಎಂದೂ ಕರೆಯುತ್ತಾರೆ. ಇದರಲ್ಲಿ ಪ್ರೋಟೀನ್, ಅಮೈನೋ ಆಸಿಡ್‌ಗಳು ಇವೆ. ಫ್ಯಾಟಿ ಆಸಿಡ್, ಮೆಗ್ನಿಶಿಯಮ್,ಕಬ್ಬಿಣಾಂಶ ಹಾಗೂ ವಿಟಮಿನ್ ಬಿ ಕೂಡ ಇದೆ. ಇದನ್ನು ನೀರಿನಲ್ಲಿ ನೆನಸಿ ಕುಡಿಯಿರಿ ಅಥವಾ ಹಾಲಿನಲ್ಲಿ ನೆನೆಸಿ ಕುಡಿಯಿರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!