Tuesday, June 28, 2022

Latest Posts

ಬೆಳಗ್ಗೆ ತಿಂಡಿಗೆ ಮುನ್ನ ಏನು ಸೇವಿಸ್ತೀರಾ ಅನ್ನೋದು ತುಂಬಾನೇ ಮುಖ್ಯ, ಈ ಆಹಾರವನ್ನು ತಿಂಡಿ ಮುನ್ನ ತಿಂದುನೋಡಿ..

ಪ್ರತಿದಿನ ನಾವು ನಮ್ಮ ದಿನವನ್ನು ಸಂತೋಷದಿಂದ ಮತ್ತು ಆರೋಗ್ಯದಿಂದ ಕಳೆಯಲು ಇಚ್ಛಿಸುತ್ತೇವೆ. ಆದರೆ ಇದಕ್ಕೆ ಅಗತ್ಯವಿರುವ ಹಾಗೂ ನಮ್ಮ ಮೂಡ್ ಫ್ರೆಶ್ ಮಾಡಿಸುವ ಆಹಾರ ಸೇವನೆ ಮಾಡೋದನ್ನು ಮಾತ್ರ ನಾವು ಮರೆತುಬಿಡುತ್ತೇವೆ.

ಆದರೆ ಪ್ರತಿ ದಿನ ಬೆಳಗ್ಗೆ ತಿಂಡಿಗೂ ಮುಂಚೆ ಈ ಆಹಾರಗಳನ್ನು ತಿಂದು ನೋಡಿ ನಿಮ್ಮ ಆರೋಗ್ಯದಲ್ಲಿ ಕಂಡುಬರುವ ಬದಲಾವಣೆಗಳನ್ನು ಗಮನಿಸಿ

ಜೇನುತುಪ್ಪ: ಬೆಳಗ್ಗೆ ಎದ್ದ ಕೂಡಲೇ ಒಂದು ಗ್ಲಾಸ್ ನೀರಿಗೆ ಲಿಂಬು ರಸ ಹಾಗೂ ಜೇನುತುಪ್ಪ ಹಾಕಿ ಕುಡಿಯುವುದರಿಂದ ನಮ್ಮ ದೇಹದ ಅನಗತ್ಯ ಕೊಬ್ಬುಗಳನ್ನು ಕರಗಿಸಲು ಸಹಾಯ ಮಾಡುತ್ತದೆ.

ಹಾಲು: ಇದರಲ್ಲಿನ ಪ್ರೋಟೀನ್ ಅಂಶವು ನಮಗೆ ಶಕ್ತಿ  ನೀಡುವಲ್ಲಿ ಸಹಕಾರಿಯಾಗಲಿದೆ.

ಮೊಟ್ಟೆ: ದಿನಾ ಬಳಗ್ಗೆ ತಿಂಡಿಗೆ ಮೊಟ್ಟೆ ಸೇವನೆ ತುಂಬಾ ಪರಿಣಾಮಕಾರಿ. ಇದರಲ್ಲಿನ ಪೋಷಕಾಂಶಗಳು ಹಾಗೂ ಒಮೇಗಾ3 ಅಂಶವು ಆರೋಗ್ಯಕ್ಕೆ ಹೆಚ್ಚು ಸಹಕಾರಿಯಾಗಲಿದೆ.

ಓಟ್ಸ್: ಇದು ನಮ್ಮ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸಿ, ದೇಹದಲ್ಲಿನ ಕೆಟ್ಟ ಕೊಬ್ಬನ್ನು ಕರಗಿಸುತ್ತದೆ.

ಕಾಫಿ: ಬೆಳಗ್ಗೆ ಕಾಫಿ ಕುಡಿಯುವುದರಿಂದ ನಮ್ಮ ಮೂಡ್ ಫ್ರೆಶ್ ಆಗಿ, ಬೆಳಗಿನ ತಲೆ ನೋವು ನಿವಾರಣೆಗೆ ಸಹಕಾರಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss