Sunday, April 11, 2021

Latest Posts

ಬೆಳಗ್ಗೆ ಹಾಸಿಗೆಯಲ್ಲೇ ಮೊಬೈಲ್ ನೋಡುವ ಅಭ್ಯಾಸವಿದ್ಯಾ? ಹಾಗಿದ್ದರೆ ಇದನ್ನು ಓದಲೇಬೇಕು..

ಈಗಿನ ಕಾಲದಲ್ಲಿ ಮಕ್ಕಳು ಮಾತ್ರವಲ್ಲದೆ ಇಡೀ ಕುಟುಂಬ ಮೊಬೈಲ್ ಗೆ ಅಡಿಕ್ಟ್ ಆಗಿರುತ್ತದೆ. ಆದರೆ ಈ ರೀತಿ ಬೆಳಗ್ಗೆ ಎದ್ದ ಕೂಡಲೇ ಮೊಬೈಲ್ ನೋಡುವುದರಿಂದ ಏನೆಲ್ಲಾ ತೊಂದರೆಯಾಗುತ್ತದೆ ಗೊತ್ತಾ?

ಮನಸ್ಸಿಗೆ ಒತ್ತಡ:
ಬೆಳಗ್ಗೆ ಎದ್ದ ಕೂಡಲೇ ಮೊಬೈಲ್ ನೋಡುವುದರಿಂದ ನಕಾರಾತ್ಮಕ ಚಿಂತೆಗಳು ಹೆಚ್ಚಾಗಿ ಇಡೀ ದಿನದ ಎನರ್ಜಿಯನ್ನು ಹಾಳು ಮಾಡುತ್ತದೆ.

ಕಣ್ಣು:
ಬೆಳಗ್ಗೆ ಎದ್ದ ಕೂಡಲೇ ಮೊಬೈಲ್ ನೋಡುವುದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ನಿಮ್ಮ ದೃಷ್ಟಿಯ ಮೇಲೆ ಪರಿಣಾಮ ಬೀರುತ್ತದೆ.

ಆಯ್ಕೆ ಮಾಡಲಾಗದು:
ಬೆಳಗ್ಗೆ ಎದ್ದ ಕೂಡಲೇ ಮೊಬೈಲ್ ನೋಡುವುದರಿಂದ ನಮ್ಮ ಬುದ್ದಿಶಕ್ತಿ ಕಡಿಮೆ ಮಾಡುತ್ತದೆ. ಇದರಿಂದ ನೀವು ನಿಮ್ಮ ವೃತ್ತಿ ಜೀವನ ಅಥವಾ ಪರ್ಸನಲ್ ಲೈಫ್’ನಲ್ಲಿ ನಿಮ್ಮ ಸ್ವಂತ ನಿರ್ಧಾರ ಕೈಗೊಳ್ಳುವುದರಲ್ಲಿ ವಿಫಲರಾಗುತ್ತೀರ.

ಮೂಡ್:
ಬೆಳಗ್ಗೆ ಎದ್ದ ಕೂಡಲೇ ಮೊಬೈಲ್ ನೋಡುವುದರಿಂದ ನೀವು ನಿಮ್ಮ ಕುಟುಂಬದಿಂದ ದೂರ ಉಳಿಯುತ್ತೀರ.. ಹೌದು.. ಬೆಳಗ್ಗೆ ಎದ್ದು ನಿಮ್ಮ ಆರೋಗ್ಯದ ಕಡೆ ಗಮನ ಹರಿಸುವುದು ಅಗತ್ಯವಿದೆ. ಕುಟುಂಬದ ಜೊತೆ ಸಮಯ ಕಳಿಯಬೇಕು.

ಖುಷಿ ಇಲ್ಲ:
ಮೊಬೈಲ್ ನಲ್ಲಿ ಸಾಕಷ್ಟು ತಮಾಷೆಗಳು, ವಿಡಿಯೋ, ಫೋಟೋಗಳು ಸಿಗುತ್ತೆ ಇದು ನಮ್ಮನ್ನು ಖುಷಿ ಪಡಿಸುತ್ತದೆ. ಆದರೆ ನಿಮ್ಮ ಮೊಬೈಲ್ ಗೆ ಬರುವ ಮೆಸೇಜ್, ನೆಗಟಿವ್ ಕಮೆಂಟ್ಸ್ ಗಳು ಬೆಳಗ್ಗೆಯೇ ನಿಮ್ಮ ಖುಷಿಯನ್ನು ಹಾಳು ಮಾಡುತ್ತದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss