ಒಂದೇ ರೀತಿ ಉಪ್ಪಿಟ್ಟು ತಿಂದು ನಿಮಗೂ ಬೋರ್ ಆಗಿರುತ್ತದೆ. ಬೇರೆ ರೀತಿ ಉಪ್ಪಿಟ್ಟು ತಿನ್ನೋಣ ಅಂದ್ರೆ ಯಾವ ಉಪ್ಪಿಟ್ಟು ಮಾಡೋದು ಅಂತ ಯೋಚನೆ ಅಲ್ವಾ? ಇನ್ನ ಮೇಲೆ ಇಡ್ಲಿ ಉಪ್ಪಿಟ್ಟು ಟ್ರೈ ಮಾಡಿ. ಸಿಂಪಲ್ ಆಗಿ ಬಹಳ ಬೇಗ ಮಾಡುವ ರೆಸಿಪಿ ಇದು.
ಬೇಕಾಗುವ ಸಾಮಗ್ರಿ:
ಇಡ್ಲಿ
ಎಣ್ಣೆ
ಸಾಸಿವೆ
ಹಸಿ ಮೆಣಸು
ಟೊಮಾಟೊ
ಅರಿಶಿಣ
ಈರುಳ್ಳಿ
ಕೊತ್ತಂಬರಿ ಸೊಪ್ಪು
ಉಪ್ಪು
ಲಿಂಬು ರಸ
ಮಾಡುವ ವಿಧಾನ:
ಮೊದಲಿಗೆ ಇಡ್ಲಿಗಳನ್ನು ಚಿಕ್ಕದಾಗಿ ಕಟ್ ಮಾಡಿಕೊಳ್ಳಿ.
ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ, ಅರಿಶಿಣ ಹಾಕಿ.
ಹಸಿಮೆಣಸು, ಈರುಳ್ಳಿ, ಟೊಮಾಟೋಗಳನ್ನು ಕಟ್ ಮಾಡಿಕೊಂಡು ಎಣ್ಣೆಗೆ ಹಾಕಿರಿ.
ಚೆನ್ನಾಗಿ ಫ್ರೈ ಮಾಡಿದ ಮೇಲೆ ಅದಕ್ಕೆ ಇಡ್ಲಿ ಚೂರುಗಳನ್ನು ಹಾಕಿರಿ. ನಂತರ ಅದಕ್ಕೆ ಉಪ್ಪು, ಲಂಬು ರಸ ಹಾಕಿದರೆ ಇಡ್ಲಿ ಉಪ್ಪಿಟ್ಟು ರೆಡಿ.