Saturday, July 2, 2022

Latest Posts

ಬೆಳ್ಳಂಬೆಳಗ್ಗೆ ಆರೋಪಿಗೆ ಫೈರಿಂಗ್ ಮಾಡಿದ ಪಿಎಸ್’ಐ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ತುಮಕೂರಿನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿಬಂದಿದ್ದು, ಕೊಲೆ ಪ್ರಕರಣ ಆರೋಪಿಯಾಗಿದ್ದ ಆರ್’ಎಕ್ಸ್. ವಿಕ್ಕಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ನಡೆದಿದೆ.

ತುಮಕೂರಿನ ರೌಡೀ ಶೀಟರ್ ಮಂಜನ ಹತ್ಯೆ ಪ್ರಕರಣದ ಆರೋಪಿಯಾಗಿದ್ದ ಆರ್.ಎಕ್ಸ್ ವಿಕ್ಕಿ ಇಷ್ಟು ದಿನ ತಲೆಮರಿಸಿಕೊಂಡು ಅಡ್ಡಾಡುತ್ತಿದ್ದ.

ಈ ಹಿನ್ನಲೆ ಆತನನ್ನು ಬಂಧಿಸುವ ವೇಳೆ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದನೆಂದು ತಿಲಕ್ ಪಾರ್ಕ್ ಠಾಣೆಯ ಪಿಎಸ್’ಐ ನವೀನ್ ಆರೋಪಿ ವಿಕ್ಕಿ ಕಾಲಿಗೆ ಫೈರಿಂಗ್ ಮಾಡಿದ್ದಾರೆ. ಸದ್ಯ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss