ಹೊಸದಿಗಂತ ಆನ್ಲೈನ್ ಡೆಸ್ಕ್:
ಭಾನುವಾರ ಮುಂಜಾನೆ ಹೈದರಾಬಾದ್ನ ಪಿವಿಎನ್ಆರ್ ಎಕ್ಸ್ಪ್ರೆಸ್ವೇನ ಪಿಲ್ಲರ್ ಒಂದರ ಬಳಿ ಅನಾತವಾಗಿ ಬಿದ್ದಿದ್ದ ಸೂಟ್ಕೇಸ್ ಪತ್ತೆಯಾಗಿದೆ.
ಇದನ್ನು ತೆಗೆದುನೋಡಿದ ರಾಜೇಂದ್ರನಗರ ಪೊಲೀಸರು ದಂಗಾಗಿದ್ದಾರೆ. ಏನಿತ್ತು ಆ ಸೂಟ್ಕೇಸ್ನಲ್ಲಿ?
ಸೂಟ್ಕೇಸ್ ತೆಗೆದು ನೋಡಿದಾಗ ಪೊಲೀಸರಿಗೆ ಆಟೋ ಚಾಲಕನ ಮೃತದೇಹವೊಂದು ಸಿಕ್ಕಿದೆ. ಆಟೋ ಓಡಿಸುತ್ತಿದ್ದ ರಿಯಾಜ್ ಎಂಬಾತ ಶನಿವಾರ ಕಾಣೆಯಾಗಿದ್ದು, ಇದೀಗ ಸೂಟ್ಕೇಸ್ನಲ್ಲಿ ಹೆಣವಾಗಿ ಪತ್ತೆಯಾಗಿದ್ದಾನೆ.
ಈ ಬಗ್ಗೆ ಎಸಿಪಿ ಸಂಜಯ್ ಕುಮಾರ್ ಮಾಹಿತಿ ನೀಡಿದ್ದು, ಬೆಳಗಿನ ಜಾವ 3:30ಕ್ಕೆ ಪೊಲೀಸ್ ಗಸ್ತು ಪಡೆಗೆ ಸೂಟ್ಕೇಸ್ ಸಿಕ್ಕಿದೆ. ಒಳಗಿದ್ದ ಮೃತದೇಹದ ಮೇಲೆ ಕೆಲವೊಂದು ಗಾಯದ ಗುರುತುಗಳಿವೆ. ಹೈದರಾಬಾದ್ನ ಓಲ್ಡ್ ಸಿಟಿಯ ಚಂದ್ರಯಾಂಗುಟ್ಟದ ನಿವಾಸಿ ರಿಯಾಜ್ ಪತ್ನಿ ಶನಿವಾರ ತನ್ನ ಪತಿ ಕಾಣುತ್ತಿಲ್ಲ ಎಂದು ಠಾಣೆ ಮೆಟ್ಟಿಲೇರಿದ್ದರು. ದ್ವೇಷದ ಹಿನ್ನೆಲೆ ಕೊಲೆ ನಡೆದಿರಬಹುದು ಎನ್ನಲಾಗಿದೆ. ಸೈಯದ್, ಫೆರೋಜ್ ಎಂಬುವವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಕೊಲೆ ಆರೋಪವನ್ನು ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.