Saturday, August 13, 2022

Latest Posts

ಬೆಳ್ಳಂಬೆಳಿಗ್ಗೆ ಮನೆಯೊಂದರಲ್ಲಿ ವೃದ್ಧರನ್ನು ಬೆದರಿಸಿ ದರೋಡೆ, ಬೆಚ್ಚಿ ಬಿದ್ದ ಮೈಸೂರು

ಮೈಸೂರು: ಬೆಳ್ಳಂಬೆಳಿಗ್ಗೆ ಮನೆಯೊಂದಕ್ಕೆ ನುಗ್ಗಿದ ದರೋಡೆಕೋರರು ವೃದ್ಧ ದಂಪತಿಯನ್ನು ಬೆದರಿಸಿ, ಅವರ ಚಿನ್ನಾಭರಣವನ್ನು ದೋಚಿ ಪರಾರಿಯಾದ ಘಟನೆ ಮೈಸೂರಿನ ವಿವೇಕಾನಂದ ಸರ್ಕಲ್ ಬಳಿಯ ೭ನೇ ಕ್ರಾಸ್ ನಲ್ಲಿ ನಡೆದಿದೆ.
ಬೆಳಿಗ್ಗೆ ೭ಗಂಟೆಯ ವೇಳೆಗೆ ವಿವೇಕಾನಂದ ಸರ್ಕಲ್ ೭ನೇ ಕ್ರಾಸ್ ನಲ್ಲಿ ವೃದ್ಧ ದಂಪತಿಗಳಿಬ್ಬರೇ ಇದ್ದ ಮನೆಗೆ ನುಗ್ಗಿದ ದರೋಡೆಕೋರರು ಅವರನ್ನು ಬೆದರಿಸಿ ವೃದ್ಧೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ, ಕಿವಿಯೋಲೆ, ಸೇರಿದಂತೆ ಆಭರಣಗಳನ್ನು ಕಿತ್ತುಕೊಂಡು ಪರಾರಿಯಾದರು. . ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇರುವ ಮನೆಯಲ್ಲಿ ದರೋಡೆ ನಡೆದಿರುವುದು ಸ್ಥಳೀಯರಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆಯಲ್ಲದೆ, ಬೆಳಗ್ಗೆಯೇ ಜನನಿಭಿಡ ಪ್ರದೇಶದಲ್ಲಿಯೇ ದರೋಡೆ ನಡೆದಿರುವುದು ಮೈಸೂರಿನ ಜನರನ್ನು ಬೆಚ್ಚಿ ಬೀಳಿಸಿದೆ. ವಿಷಯ ತಿಳಿಯುತ್ತಿದ್ದಂತೆ . ಸ್ಥಳಕ್ಕೆ ಎಸಿಪಿ ಪೂರ್ಣಚಂದ್ರ ತೇಜಸ್ವಿ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಕುವೆಂಪುನಗರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ರಾಜು ಭೇಟಿ ನೀಡಿ, ವೃದ್ಧ ದಂಪತಿ ಘಟನೆ ಕುರಿತು ಮಾಹಿತಿ ಪಡೆದುಕೊಂಡರಲ್ಲದೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss