ಯಾವ ವಾಸನೆಯಾದರೂ ತಡೆದುಕೊಳ್ಳಬಹುದು ಆದರೆ ಬೆವರಿನ ದುರ್ವಾಸನೆ ಮಾತ್ರ ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ. ಬೆವರಿನ ದುರ್ವಾಸನೆಯಿಂದ ತುಂಬಾ ಸಲಿ ಮುಜುಗರವನ್ನೂ ಅನುಭವಿಸಬೇಕಾಗುತ್ತದೆ. ತುಂಬಾ ಜನಕ್ಕೆ ಕೆಲಸ ಮಾಡದರೆ ಮಾತ್ರ ಬೆವರಿನ ದುರ್ವಾಸನೆ ಬರುತ್ತದೆ. ಇನ್ನೊಂದಿಷ್ಟು ಜನರಿಗೆ ಹಾಗೆಯೇ ಬೇವರಿದರೂ ಬೆವರು ವಾಸನೆ ಬರುತ್ತದೆ. ಆರೋಗ್ಯವಂತ ಪ್ರತಿ ಮನುಷ್ಯನಿಗೂ ಬೆವರುವುದು ಸಹಜ. ಆದರೆ ಬೆವರಿನ ದುರ್ವಾಸನೆ ಬರುತ್ತಿದ್ದರೆ ಮಾತ್ರ ಬಹಳ ಮುಜುಗರವೆನಿಸುತ್ತದೆ. ಬೆವರಿನ ದುರ್ವಾಸನೆ ತಡೆಯಲು ಇಲ್ಲಿದೆ ಸಿಂಪಲ್ ಮನೆ ಮದ್ದು..
- ಲಿಂಬೆ ಹಣ್ಣನ್ನು ಕಟ್ ಮಾಡಿಕೊಂಡು ಇದನ್ನುಕಂಕುಳಿಗೆ ಹಚ್ಚಿಕೊಂಡು ತಿಕ್ಕಿಕೊಳ್ಳಿ. ಆ ನಂತರ ಒಂದು ಬಟ್ಟೆಯಲ್ಲಿ ಒರೆಸಿಕೊಂಡರೆ ಕಂಕಳಿನ ಕಪ್ಪುಕಲೆ ಹೋಗುತ್ತದೆ. ಮತ್ತು ಬೆವರಿನ ದುರ್ವಾಸನೆ ಕಡಿಮೆ ಆಗುತ್ತದೆ.
- ಆಪಲ್ ವಿನೆಗರ್ ಕೂಡ ಬೆವರಿನ ದುರ್ವಾಸನೆ ಹೋಗಲಾಡಿಸುತ್ತದೆ. ಸ್ನಾನಕ್ಕೆ ಅರ್ಧ ಗಂಟೆ ಮೊದಲು ಕಂಕುಳಿಗೆ ಸೇಬು ವಿನೆಗರ್ ಹಚ್ಚಿ. ಸ್ನಾನದ ವೇಳೆ ಸೋಪ್ ಹಚ್ಚಿ ಕಂಕುಳು ಸ್ವಚ್ಛಗೊಳಿಕೊಳ್ಳಿ. ಆಗ ಬೆವರಿನ ವಾಸನೆ ತಡೆಯಬಹುದು.
- ಶ್ರೀಗಂಧವನ್ನು ತೇಯ್ದು ಕಂಕುಳ ಭಾಗಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಸ್ನಾನ ಮಾಡಿ ಬೆವರಿನ ವಾಸನೆ ಹೋಗುತ್ತದೆ. ದಿನವಿಡೀ ಫ್ರೆಶ್ ಆಗಿರಬಹುದು.
- ಆಲ್ಕೋಹಾಲ್ ಮತ್ತು ವಿನಿಗರ್ ಅನ್ನು ಸಮಪ್ರಮಾಣದಲ್ಲಿ ಮಿಶ್ರ ಮಾಡಿ ದೇಹಕ್ಕೆ ಹಚ್ಚಿಕೊಳ್ಳಿ. ನಂತರ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ. ಹೀಗೆ ಮಾಡಿದರೆ ಬೆವರಿನ ವಾಸನೆ ಹೋಗುತ್ತದೆ.
- ಗ್ಲೀಸರಿನ್, ಲಿಂಬುರಸ ಮತ್ತು ರೋಸ್ ವಾಟರ್ ಮಿಕ್ಸ್ ಮಾಡಿಕೊಂಡು ಆದನ್ನು ಇಡೀ ದೇಹಕ್ಕೂ ಹಚ್ಚಿಕೊಳ್ಳಿ. ನಂತರ ಬಿಸಿ ನೀರಿನಲ್ಲಿ ಸ್ನಾನ ಮಾಡಿ. ಇದನ್ನು ಬೆಳಿಗ್ಗೆ ಮಾಡಿದರೆ ದಿನವಿಡಿ ಬೆವರಿನ ವಾಸನೆ ತಡೆಯಬಹುದು.
- ಸವತೆಕಾಯಿಯನ್ನು ಪೇಸ್ಟ್ ಮಾಡಿಕೊಂಡು ಆದನ್ನು ಮೈಗೆ ಸ್ನಾನದ 10 ನಿಮಿಷ ಮೊದಲು ಹಚ್ಚಿಕೊಳ್ಳಿ ನಂತರ ಸ್ನಾನ ಮಾಡಿ. ಹೀಗೆ ಮಾಡಿದರೆ ಬೆವರಿನ ವಾಸನೆ ಹೋಗುತ್ತದೆ.