Wednesday, August 17, 2022

Latest Posts

ಬೆಹರೈನ್ ರಾಷ್ಟ್ರದ ಪ್ರಧಾನಿ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ನಿಧನ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬೆಹರೈನ್ ರಾಷ್ಟ್ರದಲ್ಲಿ ದೀರ್ಘಕಾಲ ಪ್ರಧಾನ ಮಂತ್ರಿಯಾಗಿದ್ದ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ(84) ನಿಧನರಾಗಿದ್ದಾರೆ ಎಂದು ರಾಯಲ್ ಕೋರ್ಟ್ ತಿಳಿಸಿದೆ.

ಶೇಖ್ ಖಲೀಫಾ ಬುಧವಾರ ಬೆಳಿಗ್ಗೆ ಅಮೆರಿಕದ ಮಾಯೊ ಕ್ಲಿನಿಕ್ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಬೆಹರೈನ್ ನ ರಾಜ್ಯ ಸುದ್ದಿ ಸಂಸ್ಥೆ ತಿಳಿಸಿದೆ. ಪಾರ್ಥೀವ ಶರೀರವನ್ನು ಅಮೆರಿಕದಿಂದ ಬಹ್ರೇನ್ ಗೆ ಕಳುಹಿಸಿದ ನಂತರ ಅಂತ್ಯ ಸಂಸ್ಕಾರ ನಡೆಯಲಿದೆ. ಕೊರೋನಾ ವ್ಯಾಪಕವಾಗಿರುವುದರಿಂದ ಆಪ್ತರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ದೇಶಾದ್ಯಂತ ಒಂದು ವಾರಗಳ ಕಾಲ ಶೋಕಾಚರಣೆ ಘೋಷಣೆ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!