ಹೊಸದಿಗಂತ ಆನ್ ಲೈನ್ ಡೆಸ್ಕ್:
6 ದಿನಗಳ ವಿದೇಶ ಪ್ರವಾಸ ಕೈಗೊಂಡಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇಂದು ಬೆಹರೈನ್ ನಲ್ಲಿರುವ 200 ವರ್ಷಗಳ ಇತಿಹಾಸವಿರುವ ಶ್ರೀನಾಥ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎಸ್. ಜಯಶಂಕರ್ ಅವರು, ಬೆಹರೈನ್ ನ ಮನಮಾದಲ್ಲಿರುವ 200 ವರ್ಷ ಇತಿಹಾಸವಿರುವ ದೇವಸ್ಥಾನದಿಂದ ನನ್ನ ದಿನ ಪ್ರಾರಂಭವಾಯಿತು. ಇದು ಭಾರತ ಹಾಗೂ ಬೆಹರೈನ್ ನ ನಿಕಟ ಸಂಬಂಧದ ಬಗ್ಗೆ ತಿಳಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
Began the day with darshan at the 200 year-old Shreenathji Temple at Manama. A testimony to our time- tested and close bonds with Bahrain. pic.twitter.com/U3lD3PrGMG
— Dr. S. Jaishankar (@DrSJaishankar) November 25, 2020
ಜೈಶಂಕರ್ ರವರು ಎರಡು ದಿನಗಳ ಬೆಹರೈನ್ ಗೆ ಭೇಟಿ ನೀಡಿದ್ದು, ದೇಶದ ವಿದೇಶಾಂಗ ಸಚಿವ ಡಾ.ಅಬ್ದುಲ್ಲತೀಫ್ ಬಿನ್ ರಶೀದ್ ಅಲ್ ಜಯಾನಿ ಅವರೊಂದಿಗೆ ಮಂಗಳವಾರ ದ್ವಿಪಕ್ಷೀಯ ವಿಷಯಗಳ ಕುರಿತು ಮಾತುಕತೆ ನಡೆಸಿದ್ದಾರೆ.