ಬೇಕರಿಯಲ್ಲಿ ಸಿಗುವ ಹನಿ ಕೇಕ್ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ?ಮಕ್ಕಳಿಗೂ ಕೂಡ ಹನಿ ಕೇಕ್ ಬಹಳಾನೇ ಇಷ್ಟವಾಗುತ್ತದೆ.ಆದರೆ ಮನೆಯಲ್ಲಿ ಈ ಕೇಕ್ ಮಾಡುವ ಸಹವಾಸಕ್ಕೆ ನಾವು ಹೋಗುವುದಿಲ್ಲ. ಇಲ್ಲೇ ಸ್ವಲ್ಪ ದೂರದಲ್ಲಿ ಇರುವ ಬೇಕರಿಗೆ ಹೋಗಿ ತಂದು ತಿನ್ನುತ್ತೇವೆ ಹೊರತು ಮನೆಯಲ್ಲಿ ಮಾಡಿ ತಿನ್ನುವುದಿಲ್ಲ. ಆದರೆ ಹನಿ ಕೇಕ್ ರೆಸಿಪಿ ಅಷ್ಟೊಂದು ಕಷ್ಟ ಅಲ್ಲವೇ ಅಲ್ಲ. ಹಾಗಾದರೆ ಮನೆಯಲ್ಲೇ ಹನಿ ಕೇಕ್ ಹೇಗೆ ಮಾಡುವುದು ನೋಡಿ..
ಬೇಕಾಗುವ ಸಾಮಾಗ್ರಿಗಳು
- ಮುಕ್ಕಾಲು ಕಪ್ ಮೊಸರು ಅಥವಾ ಯೋಗರ್ಟ್
- ಒಂದು ಕಪ್ ಸಕ್ಕರೆ
- ಮುಕ್ಕಾಲು ಕಪ್ ಎಣ್ಣೆ
- ಒಂದು ಸ್ಪೂನ್ ವೆನಿಲ್ಲಾ
- ಎರಡು ಕಪ್ ಮೈದಾ ಹಿಟ್ಟು
- ಕಾಲು ಸ್ಪೂನ್ ಬೇಕಿಂಗ್ ಸೋಡಾ
- ಒಂದು ಸ್ಪೂನ್ ಬೇಕಿಂಗ್ ಪೌಡರ್
- ಕಾಲು ಕಪ್ ಹಾಲು
ಸಿರಪ್ ಮಾಡಲು ಬೇಕಾದ ಸಾಮಾಗ್ರಿಗಳು - ಎರಡು ಸ್ಪೂನ್ ಸಕ್ಕರೆ
- ಕಾಲು ಕಪ್ ನೀರು
- ಕಾಲು ಕಪ್ ಜೇನುತುಪ್ಪ
ಜಾಮ್ ಮಾಡಲು ಬೇಕಾದ ಸಾಮಾಗ್ರಿಗಳು - ಕಾಲು ಕಪ್ ಸ್ಟ್ರಾಬೆರಿ ಜಾಮ್
- ಒಂದು ಸ್ಪೂನ್ ಜೇನುತುಪ್ಪ
ಮಾಡುವ ವಿಧಾನ - ಮೊದಲು ಹನಿ ಸಿರಪ್ ಮಾಡಿಕೊಳ್ಳಿ. ಅದಕ್ಕಾಗಿ ಎರಡು ಸ್ಪೂನ್ ಸಕ್ಕರೆಗೆ ಕಾಲು ಕಪ್ ನೀರು ಹಾಕಿ ಕುದಿಸಿಕೊಳ್ಳಿ
- ಸಕ್ಕರೆ ಪಾಕ ಬಿಸಿ ಇರುವಾಗಲೇ ಅದಕ್ಕೆ ಕಾಲು ಕಪ್ ಜೇನುತುಪ್ಪ ಹಾಕಿಕೊಳ್ಳಿ.
- ಮೊದಲೇ ತಯಾರಿಸಿದ್ದ ಎಗ್ಲೆಸ್ ಕೇಕ್ಗೆ ಈ ಮಿಶ್ರಣ ಹಾಕಿ ತೆಗೆದಿಡಿ.
- ನಂತರ ಜಾಮ್ ಮಾಡಲು, ಅರ್ಧ ಕಪ್ ಸ್ಟ್ರಾಬೆರಿ ಜಾಮ್ ಹಾಗು ಜೇನುತುಪ್ಪ ಹಾಕಿ ಮಿಕ್ಸ್ ಮಾಡಿ.
- ನಂತರ ಈ ಮಿಶ್ರಣವನ್ನು ಕೇಕ್ ಮೇಲೆ ಹರಡಿ.
- ತುರಿದ ಕಾಯಿ ಬೇಕಾದರೂ ಮೇಲೆ ಹಾಕಿಕೊಳ್ಳಬಹುದು.