Saturday, July 2, 2022

Latest Posts

ಬೇಕಾಬಿಟ್ಟಿ ನಡೆದುಕೊಂಡರೆ ಕಾದಿದೆ ಕ್ರಮ: ಕಾಸರಗೋಡು ಡಿವೈಎಸ್ಪಿ ಎಚ್ಚರಿಕೆ

ಹೊಸ ದಿಗಂತ ಆನ್‌ಲೈನ್ ಡೆಸ್ಕ್:

ಚುನಾವಣಾ ಪ್ರಚಾರದ ಸಂದರ್ಭ ಕೋವಿಡ್ ನಿಯಮಾವಳಿ ಉಲ್ಲಂಘಿಸುವವರಿಗೆ ಕಾಸರಗೋಡು ಡಿವೈಎಸ್ಪಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಿಯಮಾವಳಿ ಮರೆತು ಬೇಕಾಬಿಟ್ಟಿ ನಡೆದುಕೊಂಡರೆ ಮುಲಾಜಿಲ್ಲದೆ ಕಠಿಣ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಚುನಾವಣಾ ಪ್ರಚಾರದ ಸಂದರ್ಭ ಅಭ್ಯರ್ಥಿಯ ಜೊತೆಗೆ ಗರಿಷ್ಠ ಐದು ಮಂದಿಗೆ ಮಾತ್ರ ಅವಕಾಶವಿದೆ. ವಾಹನ ಬಳಕೆಗೂ ನಿಯಮಗಳಿವೆ.
ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದಿರುವ ಡಿವೈಎಸ್ಪಿ ಬಾಲಕೃಷ್ಣನ್, ಕೊರೋನಾ ವೈರಸ್ ನಮ್ಮ ನಡುವೆಯೇ ಇದೆ ಎಂಬುದನ್ನು ಮರೆಯಬಾರದು. ಚುನಾವಣಾ ಸಂದರ್ಭ ಆಗಿರುವ ಕಾರಣ ಇನ್ನಷ್ಟು ಎಚ್ಚರಿಕೆ ಅಗತ್ಯ. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಅಭ್ಯರ್ಥಿಗಳ ಬೆಂಬಲಿಗರು ಇದನ್ನು  ಮರೆಯಬಾರದು ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರ ಪೋಸ್ಟ್‌ಗಳನ್ನು ನಡೆಸಿದಲ್ಲಿ ಅಭ್ಯರ್ಥಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss