ಹೊಸ ದಿಗಂತ ಆನ್ ಲೈನ್ ಡೆಸ್ಕ್:
ವಿಶ್ವಸಂಸ್ಥೆಯಲ್ಲಿ ಕ್ಷುಲ್ಲಕ ಆರೋಪಗಳು, ಬೇಜವಾಬ್ದಾರಿಯುತ ಟೀಕೆಗಳನ್ನು ನೀಡುತ್ತಿರುವ ಪಾಕಿಸ್ತಾನವನ್ನು ಭಾರತ ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಗಂಭೀರ ಚರ್ಚೆಯ ವೇದಿಕೆಯಾಗಿದೆ. ಆದರೆ, ಕ್ಷುಲ್ಲಕ ಆರೋಪಗಳಿಗೆ ಇಲ್ಲಿ ಆಸ್ಪದವಿಲ್ಲ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ರಾಯಭಾರಿ ಟಿ. ಎಸ್. ತಿರುಮೂರ್ತಿ ಹೇಳಿದರು.
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ರಾಯಭಾರಿ ಮುನೀರ್ ಅಕ್ರಮ್ ಅವರು, ತಮ್ಮ ಭಾಷಣದಲ್ಲಿ ನಿಯಂತ್ರಣ ರೇಖೆ ಉಲ್ಲೇಖಿಸಿ ಭಾರತದ ಯುಎನ್ಎಸ್ಸಿ ಸದಸ್ಯತ್ವಕ್ಕೆ ವಿರೋಧ ವ್ಯಕ್ತಪಡಿಸಿದರು.
ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಪ್ರಾತಿನಿಧ್ಯದ ಬಗ್ಗೆ ಉದ್ಭವವಾದ ಪ್ರಶ್ನೆಗಳ ಬಗ್ಗೆ ಮಾತನಾಡಿದ ಟಿಎಸ್ ತಿರುಮೂರ್ತಿ, ಈ ಅಸೆಂಬ್ಲಿಯ ಸಮಯವನ್ನು ವ್ಯರ್ಥ ಮಾಡಲು ನಾನು ಬಯಸುವುದಿಲ್ಲ. ಅದು ಭಾರತವನ್ನು ಉಲ್ಲೇಖಿಸಿದಾಗಲೆಲ್ಲಾ ಪ್ರಾಣಿಯಂತೆ ವರ್ತಿಸುತ್ತದೆ (ಪಾವ್ಲೋವಿಯನ್). ಇದು ಗಂಭೀರ ಚರ್ಚೆಯ ವೇದಿಕೆಯಾಗಿದೆ. ಕ್ಷುಲ್ಲಕ ಆರೋಪಗಳಲ್ಲ ಎಂದು ತಿರುಮೂರ್ತಿ ತಿರುಗೇಟು ನೀಡಿದರು.
ವಿಶ್ವಸಂಸ್ಥೆಯಲ್ಲಿ ಪ್ರಸ್ತುತ 5 ಶಾಶ್ವತ ಪ್ರತಿನಿಧಿಗಳಿದ್ದು 10- ಶಾಶ್ವತವಲ್ಲದ ಸದಸ್ಯ ರಾಷ್ಟ್ರಗಳಿವೆ. ಭಾರತ, ಬ್ರೆಜಿಲ್, ದಕ್ಷಿಣ ಆಫ್ರಿಕಾ, ಜರ್ಮನಿ ಮತ್ತು ಜಪಾನ್ ಯುಎನ್ಎಸ್ಸಿಯ ಶಾಶ್ವತ ಸದಸ್ಯತ್ವಕ್ಕಾಗಿ ಪ್ರಬಲ ಸ್ಪರ್ಧಿಗಳಾಗಿವೆ.