Wednesday, July 6, 2022

Latest Posts

ಬೇಡ ಜನಾಂಗಕ್ಕೆ‌ ಎಸ್ಸಿ ಪಟ್ಟಿಯಲ್ಲಿ ಸೇರಿಸಲಾದರೂ ಜಾತಿ ಪ್ರಮಾಣ ಪತ್ರ ಇನ್ನು ಸಿಕ್ಕಿಲ್ಲ: ಚಂದ್ರಯ್ಯ ದೂರು

ಶಿವಮೊಗ್ಗ: ಸ್ಥಳ ತನಿಖೆ ಹಾಗೂ ಸ್ಥಾನಿಕ ತಮಿಖೆಯ ಆಧಾರದ ಮೇರೆಗೆ ಬೇಡ ಜಂಗಮರಿಗೆ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಆದೇಶವಿದೆ. ಈ ಹಿನ್ನಲೆಯಲ್ಲಿ ಬೇಡ ಜನಾಂಗಕ್ಕೆ‌ ಎಸ್ಸಿ ಪಟ್ಟಿಯಲ್ಲಿ ಸೇರಿಸಲಾದರೂ ಸಹ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿಲ್ಲ ಎಂದು ರಾಜ್ಯ ಬೇಡ ಜಂಗಮ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಯ್ಯ ದೂರಿದರು.
ನಗರದ ವೀರಶೈವ ಕಲ್ಯಾಣ ಮಂದಿರದ ನಿಜಲಿಂಗಪ್ಪ ಭವನದಲ್ಲಿ ಬೇಡ ಜಂಗಮರ ಸಂಘಟನೆಗೆ ಜಾತಿ ಪತ್ರ ನೀಡುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೆಲವರು ಈ ಜಾತಿಯ ಮೇಲೆ ಅಪಾಧನೆ ಮಾಡಿ ಹೈಕೋರ್ಟ್ ಗೆ ದಾವೆ ಹೂಡಿದ್ದರ ಪರಿಣಾಮ ಅಡೆತಡೆಗಳು ಉಂಟಾಯಿತು. ಆದರೆ ಆ ಅಡ್ಡಗಾಲನ್ನ ಹೈಕೋರ್ಟ್ ತನ್ನ ಆದೇಶ ಮೂಲಕ ನಿವಾರಿಸಿದೆ ಎಂದರು.
ಹೈದರಾಬಾದ್ ನಿಜಾಮರ ಕಾಲದಲ್ಲಿ ಬೇಡ ಜಂಗಮರಿಗೆ ಮೀಸಲಾತಿ ನಿಗದಿ ಪಡಿಸಿ ಆದೇಶಿಸಿದ್ದರು. ಆದರೆ ಬರು ಬರುತ್ತಾ ನಮ್ಮ ಜಾತಿಯ ಸಂಸದರು ಮತ್ತು ಶಾಸಕರು ನಿರ್ಲಕ್ಷಿಸಿದ್ದರು. ಮತ ಬ್ಯಾಂಕ್ ಮಾಡಿಕೊಂಡಿದ್ದರು. ಬೇಡ ಜಂಗಮರನ್ನ ನಿರ್ಲಕ್ಷಿಸಲಾಯಿತು ಎಂದರು.
ಆದರೆ ಈಗ ಎಸ್ಸಿ ಮೀಸಲಾತಿಯ ಪಟ್ಟಿಯಲ್ಲಿರುವ ಬೇಡ ಜಂಗಮದವರಿಗೆ ಡಿಸಿ ಸುತ್ತೋಲೆಯಲ್ಲಿ ಸ್ಥಳ ಪರಿಶೀಲನೆ ಮತ್ತು ಸ್ಥಾನಿಕ ಪರಿಶೀಲನೆಯಿಂದ ಜಾತಿ ಪತ್ರ ನೀಡಬೇಕೆಂದು ಆದೇಶ ಹೊರಡಿಸಿದ್ದಾರೆ. ಆದರೂ ನೀಡಲು ಮೀನ ಮೇಷ ಎಣಿಸಲಾಗುತ್ತಿದೆ ಎಂದು ದೂರಿದರು.
ಮೀಸಲಾತಿ ಇಲ್ಲದ ಜಾತಿಗಳೇ ಮೀಸಲಾತಿ ಬೇಕೆಂದು ಹೋರಾಡುತ್ತಿವೆ. ನಮಗೆ ಮೀಸಲಾತಿ ದೊರೆತರೂ ಸಹ ಜಾತಿ ಪ್ರಮಾಣ ಪತ್ರ ನೀಡಲು ತಾರತಮ್ಯ ಎಣಿಸಲಾಗುತ್ತಿದೆ. ಸೂರ್ಯನಾಥ್ ಕಾಮಥ್ ವರದಿಯೂ ಸಹ ಬೇಡ ಜಂಗಮವೆಂದರೆ ವೀರಶೈವ ಎಂದು ವರದಿಯಲ್ಲಿ ಉಲ್ಲೇಖವಿದೆ. ಆದರೂ ಸಹ ಸರ್ಕಾರದಲ್ಲಿರುವ ಕೆಲ ನಮ್ಮವರೇ ಅಡ್ಡಗಾಲು ಹಾಕುತ್ತಿದ್ದಾರೆ. ಹಾಗಾಗಿ ಒಗ್ಗಟ್ಟಿನ ಮೂಲಕ ಈ ಸವಲತ್ತನ್ನ ಪಡೆಯವೇಕೆಂದು ಚಂದ್ರಯ್ಯ ಕರೆ ನೀಡದರು.
ಮೊಬೈಲ್ ನಲ್ಲಿ ಬೇಡ ಜಂಗಮರ ವತಿಯಿಂದ ಆಪ್ ಬಿಡುಗಡೆ ಮಾಡಲಾಗಿದೆ. ಇದರ ಮೂಲಕ ತಮ್ಮ ಹೆಸರು ನೋಂದಾಯಿಸಿಕೊಳ್ಳಿ ಎಂದು ಕರೆ ನೀಡಿದರು.
ವೀರಶೈವ ಬೇಡ ಜಂಗಮ ಸಮಾಜದ ಮುಖಂಡ,ನಿವೃತ್ತ ಎಸ್ಪಿ ಪಿ.ಒ.ಶಿವಕುಮಾರ್, ಮಹೇಶ್ವರಯ್ಯ, ಮಲ್ಲಿಕಾರ್ಜುನ ಸ್ವಾಮಿ, ಸುಜಯ ಪ್ರಸಾದ್, ರೇಣುಕಾರಾಧ್ಯ, ಪತ್ರಕರ್ತ ಸೋಮನಾಥ್ , ಶಶಿಧರ್, ಮರುಳೇಶ್ ಮೊದಲಾದವರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss