ತೆಂಗಿನ ಎಣ್ಣೆ ಕೇವಲ ಸೌಂದರ್ಯ ವರ್ಧಕವಲ್ಲ . ಆರೋಗ್ಯಕರವಾಗಿಯೂ ಇದು ಒಳ್ಳೆಯದು. ನಿತ್ಯ ತೆಂಗಿನ ಎಣ್ಣೆಯನ್ನು ಸೇವಿಸಿದರೆ ತೂಕ ಕಡಿಮೆ ಆಗುತ್ತದೆ. ದೇಹದಲ್ಲಿ ಇರುವ ಎಣ್ಣೆ ಅಂಶ ಹಾಗೆಯೇ ಇರಬೇಕು ಎಂದಾದರೆ ತೆಂಗಿನ ಎಣ್ಣೆ ಸೇವಿಸಲೇ ಬೇಕು.. ಆದರೆ ತೆಂಗಿನ ಎಣ್ಣೆಯನ್ನು ಹಾಗೇ ಸೇವಿಸುವುದಕ್ಕೆ ಆಗುವುದಿಲ್ಲ.ಬೇರೆ ಅಡುಗೆ ಊಟ ಮಾಡುವ ಮೊದಲು 5 ತುತ್ತು ತೆಂಗಿನ ಎಣ್ಣೆ ಅನ್ನ ಊಟ ಮಾಡಿ… ಇದರಿಂದ ಎಷ್ಟೆಲ್ಲ ಲಾಭವಿದೆ ಗೊತ್ತಾ?
ಬಾಯಿ ಹುಣ್ಣು:
ಬಾಯಿಯಲ್ಲಿ ಆಗುವ ಹುಣ್ಣುಗಳನ್ನು ನಿವಾರಣೆ ಮಾಡಲು ಊಟ ಮಾಡುವಾಗ ಮೊದಲಿನ ಐದು ತುತ್ತುಗಳನ್ನು ತೆಂಗಿನ ಎಣ್ಣೆ ಅನ್ನ ಮಾಡಿಕೊಂಡು ಊಟ ಮಾಡಿ. ಅನ್ನಕ್ಕೆ ತೆಂಗಿನ ಎಣ್ಣೆ ಹಾಕಿ ಕಲಸಿ ಕೊಂಡು ಊಟ ಮಾಡಬೇಕು. ಹೀಗೆ ಮಾಡಿದರೆ ಬಾಯಿ ಹುಣ್ಣು ಹೋಗುತ್ತದೆ.
ಪ್ಯಾರಾಲಿಸಿಸ್:
ದಿನವೂ ತೆಂಗಿನ ಎಣ್ಣೆ ಅನ್ನವನ್ನು ಊಟ ಮಾಡಿದರೆ ಪ್ಯಾರಾಲಿಸಿಸ್ ಅಟಾಕ್ ಆಗುವುದಿಲ್ಲ.
ಹೃದಯ:
ತೆಂಗಿನ ಎಣ್ಣೆ ಅನ್ನವು ಹೃದಯ ಸಂಬಂಧಿ ರೋಗಗಳು ಬಾರದಂತೆ ತಡೆಯುತ್ತದೆ. ಹೃದಯ ಆರೋಗ್ಯವಾಗಿರುತ್ತದೆ.
ಡಾರ್ಕ್ ಸರ್ಕಲ್:
ನಿತ್ಯ ತೆಂಗಿನ ಎಣ್ಣೆ ಅನ್ನವನ್ನು ಊಟ ಮಾಡುತ್ತಾ ಇದ್ದರೆ ಡಾರ್ಕ್ ಸರ್ಕಲ್ ಕಡಿಮೆ ಆಗುತ್ತ ಬರುತ್ತದೆ.
ಸಂಧಿ ನೋವು:
ದೇಹದಲ್ಲಿ ಎಣ್ಣೆ ಅಂಶ ಕಡಿಮೆ ಆದರೆ ಸಂಧಿಗಳು ನೋವು ಬರುತ್ತದೆ. ದಿನವೂ ತೆಂಗಿನ ಎಣ್ಣೆ ಅನ್ನವನ್ನು ಊಟ ಮಾಡುವುದರಿಂದ ಸಂಧಿ ನೋವುಗಳು ನಿವಾರಣೆಯಾಗುತ್ತದೆ.
ಜೀರ್ಣ:
ತಿಂದಿರುವ ಆಹಾರ ಸರಿಯಾಗಿ ಜೀರ್ಣ ಆಗದಿರುವ ಸಮಸ್ಯೆ ತೆಂಗಿನ ಎಣ್ಣೆ ಅನ್ನದ ಸೇವನೆಯಿಂದ ನಿವಾರಣೆಯಾಗುತ್ತದೆ. ಇದು ಜೀರ್ಣ ಕ್ರಿಯೆ ಸರಾಗವಾಗುವಂತೆ ಮಾಡುತ್ತದೆ.