Sunday, April 11, 2021

Latest Posts

ಬೇರೆ ರೋಗಿಗಳಿಗೆ ಬೆಡ್ ನೀಡಲು ಇರುವ ರೋಗಿಗಳನ್ನು ಕೊಂದ ವೈದ್ಯ!!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬೇರೆ ರೋಗಿಗಳಿಗೆ ಬೆಡ್ ನೀಡಲು, ಇರುವ ರೋಗಿಗಳಿಗೆ ಮಾತ್ರೆ ಹಾಕಿ ಸಾಯಿಸುತ್ತಿದ್ದ ಆರೋಪದ ಮೇಲೆ ವೈದ್ಯನೊಬ್ಬನನ್ನು ಬಂಧಿಸಲಾಗಿದೆ.
ಇಟಲಿಯ ಮೊಂಟಿಚಿಯಾರಿ ಆಸ್ಪತ್ರೆಯ ವೈದ್ಯ ಡಾ| ಕಾರ್ಲೋ ಮೋಸ್ಕಾರನ್ನು ಬಂಧಿಸಲಾಗಿದೆ.
ಈ ವೈದ್ಯನಿಗೆ ಹುಚ್ಚು ಹಿಡಿದಿದೆ. ಬೆಡ್ ಖಾಲಿ ಮಾಡಿಸಲು ರೋಗಿಗಳನ್ನು ಕೊಲ್ಲುತ್ತಿದ್ದಾನೆ ಎಂಬ ಅನಾಮಿಕ ಸಂದೇಶ ಎಲ್ಲೆಡೆ ಹರಿದಾಡಿತ್ತು. ಇದರ ಜಾಡು ಹಿಡಿದು ತನಿಖೆ ಆರಂಭಿಸಿದ ಪೊಲೀಸರು ವೈದ್ಯನನ್ನು ಬಂಧಿಸಿದ್ದಾರೆ.
ಈ ಪ್ರದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮಿತಿಮೀರಿತ್ತು. ದಿನಕ್ಕೆ ಸಾಯುವವರ ಸಂಖ್ಯೆ 800ಕ್ಕೂ ಹೆಚ್ಚಿತ್ತು. ಆ ಸಮಯದಲ್ಲಿ ಆಸ್ಪತ್ರೆಗಳಲ್ಲಿ ಬೆಡ್‌ನ ಕೊರತೆ ಎದ್ದು ಕಾಣುತ್ತಿತ್ತು. ಇಂಥ ಸಮಯದಲ್ಲಿ ಇಬ್ಬರು ಸೋಂಕಿತರಿಗೆ ಅನಸ್ತೇಶಿಯಾ ಹಾಗೂ ಬೇರೆ ಮಾತ್ರೆಗಳನ್ನು ಕೊಟ್ಟು ಸಾಯಿಸಿದ್ದಾರೆ ಎನ್ನಲಾಗಿದೆ. ಅನ್ಯ ರೋಗಿಗಳಿಗೂ ಜಾಗ ಸಿಗಲಿ ಎಂದು ಹೀಗೆ ಮಾಡಿದ್ದಾರೆ ಎನ್ನಲಾಗಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss