Wednesday, June 29, 2022

Latest Posts

ಬೇವಿಂಜೆ ಶೂಟೌಟ್ ಪ್ರಕರಣ: ರವಿ ಪೂಜಾರಿಯನ್ನು ವಶಕ್ಕೆ ತೆಗೆದುಕೊಳ್ಳಲು ಕಾಸರಗೋಡು ಕ್ರೈಂ ಬ್ರ್ಯಾಂಚ್ ನಿರ್ಧಾರ!

ಮಂಗಳೂರು: ಬೇವಿಂಜೆಯ ಗುತ್ತಿಗೆದಾರ ಎಂ. ಟಿ. ಮುಹಮ್ಮದ್ ಕುಂಞಿ ಎಂಬವರ ಮನೆ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಭೂಗತ ಪಾತಕಿ ರವಿ ಪೂಜಾರಿಯನ್ನು ವಶಕ್ಕೆ ತೆಗೆದುಕೊಳ್ಳಲು ಕಾಸರಗೋಡು ಕ್ರೈಂ ಬ್ರ್ಯಾಂಚ್ ನಿರ್ಧರಿಸಿದೆ.

2008 ಹಾಗೂ 2013ರಲ್ಲಿ ಮಹಮ್ಮದ್ ಕುಂಞಿ ಮನೆಗೆ ಗುಂಡಿನ ದಾಳಿ ನಡೆದಿತ್ತು. ಭಾರೀ ಮೊತ್ತದ ಹಣ ನೀಡದ ಕಾರಣ ತಂಡವು ಬೈಕ್ ಗಳಲ್ಲಿ ಬಂದು ಮನೆಗೆ ಗುಂಡು ಹಾರಿಸಿತ್ತು. ಹಣದ ಬೇಡಿಕೆ ರವಿ ಪೂಜಾರಿ ಇಟ್ಟಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿತ್ತು. ಅಲ್ಲದೆ ಮಹಮ್ಮದ್ ಕುಂಞಿಯವರ ಮೊಬೈಲ್ ಗೆ ಬಂದ ಬೆದರಿಕೆ ಕರೆಯನ್ನು ಪರಿಶೀಲಿಸಿದಾಗ ಅದು ಆಫ್ರಿಕಾದ ಸೆನಗಲ್ ನಿಂದ ಬಂಡ ಕರೆ ಎಂಬುದೂ ಬೆಳಕಿಗೆ ಬಂದಿತ್ತು. ಬೆಂಗಳೂರಿನಲ್ಲಿ ಕೆಲವು ದಿನಗಳ ಹಿಂದೆ ಕೊಲೆಗೀಡಾದ ರವಿ ಪೂಜಾರಿಯ ಸಹಚರ ಮನೀಶ್ ಶೆಟ್ಟಿ ಬೇವಿಂಜೆ ಈ ಪ್ರಕರಣದ ಆರೋಪಿಯಾಗಿದ್ದು, ಕೊಲೆಯಾದ ಹಿನ್ನೆಲೆಯಲ್ಲಿ ಈತನನ್ನು ಪ್ರಕರಣದಿಂದ ಮುಕ್ತಗೊಳಿಸಲಿದೆ.

ತನಿಖೆಯ ಮುಂದುವರಿದ ಹಂತವಾಗಿ ರವಿ ಪೂಜಾರಿಯನ್ನು ವಶಕ್ಕೆ ತೆಗೆದುಕೊಳ್ಳಲು ಕ್ರೈಂ ಬ್ರ್ಯಾಂಚ್ ನಿರ್ಧರಿಸಿದ್ದು, ಶೀಘ್ರ ಬೆಂಗಳೂರು ಜೈಲಿಗೆ ತೆರಳಿ ವಶಕ್ಕೆ ತೆಗೆದುಕೊಳ್ಳಲಿದೆ. ನ್ಯಾಯಾಲಯದ ಅನುಮತಿ ಪಡೆದು ಬಂಧಿಸಲಾಗುವುದು ಎಂದು ಕ್ರೈಂ ಬ್ರಾಂಚ್ ಮೂಲಗಳು ತಿಳಿಸಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss