ಬೇಸಿಗೆಯಲ್ಲಿ ದೇಹದ ಉಷ್ಣತೆ ಹೆಚ್ಚಿರುವುದರಿಂದ ಆದಷ್ಟು ತಂಪಗಿನ ಆಹಾರವನ್ನೇ ಸೇವಿಸಬೇಕು. ಕ್ಯಾರೆಟ್ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಇದನ್ನು ನೇರವಾಗಿ ಸೇವಿಸಲು ಆಗದವರು ಕ್ಯಾರೆಟ್ ಕೊಸಂಬರಿ ಮಾಡಿಕೊಂಡು ಊಟದ ಜೊತೆ ಸೇವಿಸಬಹುದು. ಕ್ಯಾರೆಟ್ ಕೊಸಂಬರಿ ಮಾಡುವುದು ಬಹಳ ಸರಳ. ಹೀಗೆ ಮಾಡಿ ಕೊಸಂಬರಿ.
ಬೇಕಾಗುವ ಪದಾರ್ಥ:
ಕ್ಯಾರೆಟ್
ಲಿಂಬು
ಉಪ್ಪು
ಹಸಿ ಮೆಣಸು
ಹೆಸರು ಬೇಳೆ
ಮಾಡುವ ವಿಧಾನ:
ಮೊದಲಿಗೆ 5 ಚಮಚ ಹೆಸರು ಬೇಳೆಯನ್ನು 5 ತಾಸು ನೀರಿನಲ್ಲಿ ನೆನೆಸಿಕೊಳ್ಳಿ. ಆನಂತರ 3 ಕ್ಯಾರೆಟ್ ತುರಿದುಕೊಳ್ಳಿ. ಅದಕ್ಕೆ ನೆನೆಸಿಟ್ಟ ಹೆಸರುಬೇಳೆ, ಹೆಚ್ಚಿಕೊಂಡ ಹಸಿಮೆಣಸು, ಉಪ್ಪು, ಲಿಂಬೆ ರಸ ಹಾಕಿ ಮಿಕ್ಸ್ ಮಾಡಿದರೆ ಕ್ಯಾರೆಟ್ ಕೊಸಂಬರಿ ರೆಡಿ. ಇದನ್ನು ಊಟದ ಜೊತೆ ಸೇವಿಸಿ.