Friday, January 22, 2021

Latest Posts

ಬೈಕ್‍ನಲ್ಲಿ ಗಾಂಜಾ ಸಾಗಾಟ: ಇಬ್ಬರ ಬಂಧನ

ಹೊಸದಿಗಂತ ವರದಿ ಸುಂಟಿಕೊಪ್ಪ:

ಮೋಟಾರ್ ಬೈಕ್‍ನಲ್ಲಿ ಅಕ್ರಮವಾಗಿ ಮಾದಕ ವಸ್ತು ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕುಶಾಲನಗರದ ಮಾದಾಪಟ್ಟಣ ನಿವಾಸಿಗಳಾದ ವಿಜಯಕುಮಾರ್ ಹಾಗೂ ಕಿರಣ್ ಬಂಧಿತ ಆರೋಪಿಗಳು.

ಈ ಇಬ್ಬರು ಹೀರೋ ಹೊಂಡಾ(ಕೆಎ12ಆರ್6905) ಮೋಟಾರ್ ಬೈಕ್‍ನಲ್ಲಿ ಕುಶಾಲನಗರ ಕಡೆಯಿಂದ ಸುಂಟಿಕೊಪ್ಪಕ್ಕೆ ಅಕ್ರಮವಾಗಿ ಗಾಂಜಾ ಪುಡಿಯನ್ನು ಮಾರಾಟ ಮಾಡಲು ತರುತ್ತಿರುವುದಾಗಿ ದೊರೆತ ಖಚಿತ ಮಾಹಿತಿ ಮೇರೆ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಡಿ.ಎಸ್.ಪುನೀತ್, ಸಿಬ್ಬಂದಿಗಳಾದ ಸತೀಶ್, ಖಾದರ್, ಪುನಿತ್ ಅವರುಗಳು 7ನೇ ಹೊಸಕೋಟೆ ಮೆಟ್ನಹಳ್ಳ ಬಳಿ ಬೈಕ್ ತಡೆದು ತಪಾಸಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದಿದ್ದಾರೆ, ಇವರ ವಿರುದ್ಧ ಸೆಕ್ಷನ್ 20(ಬಿ)2(ಎ)ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!