Thursday, August 11, 2022

Latest Posts

ಬೈಕ್ ನಲ್ಲಿ ಗಾಂಜಾ ಸಾಗಾಟ: ಮಾಲು ಸಹಿತ ಓರ್ವ ಸೆರೆ- ಮತ್ತೋರ್ವ ಪರಾರಿ

ಮಡಿಕೇರಿ: ಸಾರ್ವಜನಿಕರಿಗೆ ಮಾರಾಟ ಮಾಡಲು ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿದ ವೀರಾಜಪೇಟೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ವೀರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿಯವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಠಾಣಾ ಸರಹದ್ದಿನ ಬಿಟ್ಟಂಗಾಲ ಗ್ರಾಮದಲ್ಲಿ ಗೋಣಿಕೊಪ್ಪ ಕಡೆಯಿಂದ ವೀರಾಜಪೇಟೆ ಕಡೆಗೆ ಮೋಟಾರ್ ಸೈಕಲಿನಲ್ಲಿ ಬರುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ತಡೆದು ಪರಿಶೀಲಿಸಿದಾಗ ಅದರಲ್ಲಿ ಗಾಂಜಾ ಪತ್ತೆಯಾಗಿದೆ.

ಬೈಕ್ ನಲ್ಲಿದ್ದ ಕಿರಗೂರು ಗ್ರಾಮದ ಪೆಮ್ಮಂಡ ಯು. ಸೋಮಣ್ಣ ಅಲಿಯಾಸ್ ಸುಹಾಸ್ ಎಂಬವರನ್ನು ವಶಕ್ಕೆ ಪಡೆದ ಪೊಲೀಸರು ಅವರಬಳಿ ಇದ್ದ 45 ಗ್ರಾಂ ತೂಕದ ಗಾಂಜಾ, ಒಂದು ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ಸಂದರ್ಭ ಮತ್ತೊಬ್ಬ ಆರೋಪಿ ಬಾಳುಗೋಡು ಗ್ರಾಮದ ಚೇಂದಂಡ ಬೋಪಣ್ಣ ಪರಾರಿಯಾಗಿರುವುದಾಗಿ ಹೇಳಲಾಗಿದೆ.

ವೀರಾಜಪೇಟೆ ಉಪ ವಿಭಾಗದ ಡಿವೈ.ಎಸ್.ಪಿ. ಸಿ.ಟಿ. ಜಯಕುಮಾರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೀರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ವೀಣಾನಾಯಕ್, ಗೋಣಿಕೊಪ್ಪ ಠಾಣೆಯ ಎಎಸ್ಐ ಸುಬ್ರಮಣಿ ಸಿಬ್ಬಂದಿಗಳಾದ ವೀರಾಜಪೇಟೆ ಗ್ರಾಮಾಂತರ ಠಾಣೆಯ ರಾಮಪ್ಪ ಮತ್ತು ಚಂದ್ರಶೇಖರ ಹಾಗೂ ಪೊನ್ನಂಪೇಟೆ ಠಾಣೆಯ ಎಂ.ಡಿ.ಮನು ಅವರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss