ಹೊಸ ದಿಗಂತ ವರದಿ, ಮೈಸೂರು:
ನಿಯಂತ್ರಣ ಕಳೆದುಕೊಂಡು ಬೈಕ್ ಉರುಳಿಬಿದ್ದ ಪರಿಣಾಮ ಸವಾರ ಸಾವನ್ನಪ್ಪಿದ ಘಟನೆ ನಂಜನಗೂಡು ತಾಲೂಕಿನ ನೇರಳೆ ಗೇಟ್ ಬಳಿ ನಡೆದಿದೆ.
ಚಾಮರಾಜನಗರ ತಾಲೂಕಿನ ಬಿಜುನಗರ ಗ್ರಾಮದ ನಿವಾಸಿ ಟಿವಿಎಸ್ ಕಂಪನಿಯ ಕಾರ್ಮಿಕ ಶಿವಕುಮಾರ್(30) ಮೃತಪಟ್ಟವ. ಈತ ಮೈಸೂರು ನಗರಕ್ಕೆ ಬರುತ್ತಿದ್ದಾಗ ಹೆದ್ದಾರಿಯಲ್ಲಿ ಮಂಜು ಕವಿದಿದ್ದರಿಂದ ಕಾಣಿಸದೇ ಸತ್ತು ಬಿದ್ದಿದ್ದ ಜಿಂಕೆಯ ಕಳೇಬರದ ಮೇಲೆ ಬೈಕ್ ಹತ್ತಿಸಿದ್ದಾರೆ. ಈ ವೇಳೆ ಬೈಕ್ ನಿಯಂತ್ರಣ ಕಳೆದುಕೊಂಡು ಉರುಳಿ ಬಿದ್ದಿದ್ದು, ತಲೆಗೆ ಗಂಭೀರಗಾಯಗಳಾಗಿತ್ತು. ಕೂಡಲೇ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾನೆ. ಈ ಬಗ್ಗೆ ದೊಡ್ಡ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.