Thursday, August 11, 2022

Latest Posts

ಬೈಪಾಸ್ ಅಗಲೀಕರಣಕ್ಕೆ ಡಿಪಿಆರ್ ರೆಡಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹೊಸ ದಿಗಂತ ವರದಿ, ಧಾರವಾಡ:

ಬೈಪಾಸ್ ರಸ್ತೆಯ ಅಗಲೀಕರಣಕ್ಕೆ ಇರುವ ಸಮಸ್ಯೆಗಳನ್ನು ಇತ್ಯರ್ಥಪಡಿಸಿದ್ದು, ಸದ್ಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಿದೆ. ಶೀಘ್ರದಲ್ಲಿಯೇ ರಸ್ತೆ ಅಗಲೀಕರಣ ಕಾರ್ಯ ಮಾಡುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಪಾಸ್ ರಸ್ತೆ ಅಗಲೀಕರಣದ ಮೊದಲಿದ್ದ ಸಮಸ್ಯೆಗಳನ್ನು ಸದ್ಯ ಬಗೆಹರಿಸಿದೆ. ಜ.27ರಂದು ರಾಷ್ಟಿçಯ ಹೆದ್ದಾರಿ ಅಧ್ಯಕ್ಷ ಹಾಗೂ ನಿರ್ದೇಶಕರ ಸಭೆ ನಡೆಸುವುದಾಗಿಯೂ ತಿಳಿಸಿದರು.
ರೂ.1,200 ಕೋಟಿ ವೆಚ್ಚದಲ್ಲಿ ಷಟ್ಪಥ(ಆರು) ರಸ್ತೆ ನಿರ್ಮಾಣ ಕಾಮಗಾರಿ ನಡೆಯಲಿದೆ. ರಾಜ್ಯ ಸರ್ಕಾರ ರಾಜ್ಯ ಸರ್ಕಾರ ರಸ್ತೆ ಹಾಗೂ ಭೂಮಿ ಹಸ್ತಾಂತರ ಮಾಡಿದರೆ 60 ದಿನಗಳಲ್ಲಿ ಆರುಪಥ ರಸ್ತೆ ಕಾಮಗಾರಿ ಆರಂಭಿಸಲಿದೆ ಎಂದರು.
ಶಾಸಕರ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಧಿಕಾರ ಇದ್ದಾಗ ಆಕಾಂಕ್ಷಿಗಳು ಹೀಗೆಲ್ಲ ಮಾತನಾಡುತ್ತಾರೆ. ಅಸಮಧಾನ ಶಾಸಕರನ್ನು ಸಮಾಧಾನ ಪಡಿಸುವ ಕೆಲಸ ಮುಖ್ಯಮಂತ್ರಿಗಳು ಮಾಡಲಿದ್ದಾರೆ ಎಂದು ಉತ್ತರಿಸಿದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss