Monday, August 8, 2022

Latest Posts

ಬೋಗುರ ಗ್ರಾಮದ ಪ್ರಕರಣ: ಅತ್ಯಾಚಾರಿಗಳಿಗೆ ಮರಣ ದಂಡನೆಗೆ ಆಗ್ರಹಿಸಿ ಗಾಂಧಿ ಪ್ರತಿಮೆ ಮುಂದೆ ಮೊಂಬತ್ತಿ ಪ್ರತಿಭಟನೆ

ಧಾರವಾಡ: ತಾಲೂಕಿನ ಮಾಧನಬಾವಿ ಹಾಗೂ ಬೋಗುರ ಗ್ರಾಮದ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಖಂಡಿಸಿ ಹಾಗೂ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಗಾಂಧಿ ಪ್ರತಿಮೆ ಮುಂದೆ ಬುಧವಾರ ಮೊಂಬತ್ತಿ ಬೆಳಗಿಸುವ ಮೂಲಕ ಮೌನವಾಗಿ ಪ್ರತಿಭಟಿಸಿದರು.
ಎರಡು ನಿಮಿಷ ಮೌನಾಚರಣೆ ನಡೆಸಿದ ಸಂಘಟನೆಗಳು, ಅತ್ಯಾಚಾರಿಗಳಿಗೆ ಮರಣ ದಂಡನೆ ಶಿಕ್ಷೆಯೇ ವಿಧಿಸುವ ಮೂಲಕ ಈ ಕುಲಗೆಟ್ಟ ಸಮಾಜಕ್ಕೆ ಎಚ್ಚರಿಕೆ ಸಂದೇಶ ರವಾನಿಸಬೇಕೆಂದು ಆಗ್ರಹಿಸಿದರು.
ಸಾಧನಾ ಮಾನವ ಹಕ್ಕುಗಳ ಒಕ್ಕೂಟ, ವಿಸ್ಮಯ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ, ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ರಕ್ಷಣಾ ಸಮಿತಿ, ಆರೂಢ ಸಂಸ್ಥೆ, ಕದಂಬ ಕರ್ನಾಟಕ ರಕ್ಷಣಾ ವೇದಿಕೆ ಭಾಗಹಿಸಿದ್ದವು.
ಈ ಸಂದರ್ಭದಲ್ಲಿ ಡಾ. ಇಸಬೆಲ ಝೇವಿಯರ್, ಸಾವಿತ್ರಿ ಯಳವತ್ತಿಮಠ, ಬಸವರಾಜ ಆನೆಗುಂದಿ, ಕಿಶೋರ ಕಟ್ಟಿ, ನಾಗರಾಜ ಹೂಗಾರ, ಮಾರುತಿ ನಾಯ್ಕ, ಅರ್ಜುನ ವಡ್ಡರ, ಚಂದ್ರಶೇಖರ ಹಿರೇಮಠ, ಹನಮಂತ ಭಜಂತ್ರಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss