Monday, August 15, 2022

Latest Posts

ಬೋಗೂರ ಗ್ರಾಮದ ಅತ್ಯಾಚಾರ ಪ್ರಕರಣ: ಆರೋಪಿಯನ್ನು ಗಲ್ಲಿಗೇರಿಸಲು ಆಗ್ರಹಿಸಿ ಬೇಡ ಜಂಗಮ ಸಮಾಜದಿಂದ ಉಸ್ತುವಾರಿ ಸಚಿವರಿಗೆ ಮನವಿ

ಯಾದಗಿರಿ: ಧಾರವಾಡದ ಬೋಗೂರ ಗ್ರಾಮದ ಬೇಡ ಜಂಗಮ ಸಮಾಜದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಆರೋಪಿಗೆ ಗಲ್ಲಿಗೇರಿಸಬೇಕೆಂದು ಆಗ್ರಹಿಸಿ ಬೇಡ ಜಂಗಮ ಸಮಾಜ ಅಭಿವೃದ್ಧಿ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಧಾರವಾಡದ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ನಾಗರೀಕ ಸಮಾಜ ತಲೆತಗ್ಗಿಸುವಂತದ್ದು. ಇಷ್ಟಕ್ಕೂ ಆ ಬಾಲಕಿ ಮಾಡಿದ ತಪ್ಪಾದ್ರು ಏನು? ಆಕೆ ಹೆಣ್ಣಾಗಿದ್ದೇ ತಪ್ಪಾ? ಇಂತಹ ಘಟನೆ ಮರುಕಳಿಸದಂತೆ ಉಗ್ರ ಕ್ರಮ ಕೈಗೊಳ್ಳಬೇಕು. ಸರ್ಕಾರ ಬಾಲಕಿಗೆ ಕುಟುಂಬಕ್ಕೆ ಪೂರ್ಣ ಭದ್ರತೆ ಕೊಡುವುದರ ಜೊತೆಗೆ ತಪ್ಪಿತಸ್ಥರಿಗೆ ಶೀಘ್ರ ಮರಣದಂಡನೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು. ಸಂತ್ರಸ್ತೆಗೆ ನ್ಯಾಯ ಸಿಗುವವರೆಗೂ ತಪ್ಪಿತಸ್ಥರಿಗೆ ಶಿಕ್ಷೆ ಆಗುವವರೆಗೂ ಈ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದ ಪ್ರತಿಭಟನಾಕಾರರು
ನಿರ್ಭಯಾ ಹಾಗೂ ಹೈದ್ರಾಬಾದ್ ನ ಡಾ|| ಪ್ರಿಯಾಂಕಾ ರೆಡ್ಡಿ ಅವರಿಗೆ ನ್ಯಾಯ ಒದಗಿಸಿದಂತೆ ಈ ಪ್ರಕರಣವನ್ನೂ ಪರಿಗಣಿಸಿ ದುಷ್ಕೃತ್ಯ ಎಸಗಿದ ಪಾಪಿಷ್ಟನಿಗೆ ಕಠಿಣಾತಿಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದರು.
ಬೇಡ ಜಂಗಮ ಅಭಿವೃದ್ದಿ ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ ವೈಜನಾಥ ಹಿರೇಮಠ ಸಚಿವರಿಗೆ ಮನವಿ ಸಲ್ಲಿಸಿದರು, ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ರುದ್ರ ಸ್ವಾಮಿ ಮೇಗಳಮಠ, ನಗರ ಘಟಕದ ಅಧ್ಯಕ್ಷರಾದ ಪ್ರಭು ಮುಂಡರಗಿಮಠ, ತೋಟೇಂದ್ರ ಶಾಸ್ತಿç ಅಬ್ಬೆತುಮಕೂರು, ಚೆನ್ನಬಸವ ಹಿರೇಮಠ ಹೊಸಳ್ಳಿ, ಮಲ್ಲಿಕಾರ್ಜುನಯ್ಯ ಸ್ವಾಮಿ ಗುಡಿಮಠ, ಚೆನ್ನಯ್ಯಸ್ವಾಮಿ ಹಿರೇಮಠ, ಪ್ರಕಾಶ ಸ್ವಾಮಿ ಬಿಚ್ಚಾಲಿಮಠ ಇನ್ನಿತರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss