ಹಾಸನ: ಬೋರ್ಗರೆದು ಹರಿಯುತ್ತಿರುವ ಕಾವೇರಿ ನದಿಯ ನೀರಿನಿಂದ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ನೆರೆ ಪರಿಸ್ಥಿತಿ ತಲೆದೋರಿದೆ. ಕಾವೇರಿ ನದಿ ತಟದಲ್ಲಿರುವ ರಾಮನಾಥಪುರದಲ್ಲಿ ಎಂದಿನಂತೆ ಈ ವರ್ಷವೂ ಕಾವೇರಿ ಅವಾಂತರ ಸೃಷ್ಟಿಸಿದ್ದು, ನದಿ ತಟದ ಬಡಾವಣೆಗಳ ಜನರು ತೀರಾ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈಗಾಗಲೇ 20 ಮನೆಗಳಿಗೆ ನೀರು ನುಗ್ಗಿದ್ದು, ಜನರನ್ನು ಸುರಕ್ಷಿತಾ ಸ್ಥಳಗಳಿಗೆ ಕಳುಹಿಸಲಾಗಿದೆ. ಕಳೆದ ಮೂರು ವರ್ಷದ ಮಳೆಗೂ ರಾಮನಾಥಪುರದಲ್ಲಿ ಭಾರೀ ಕಾವೇರಿ ನದಿಯಿಂದ ಸಂಕಷ್ಟ ಸೃಷ್ಟಿಯಾಗುತ್ತಲೇ ಬಂದಿದ್ದು, ಜನರು ತಡೆಗೋಡೆ ನಿರ್ಮಾಣಕ್ಕೆ ಆಗ್ರಹಿಸಿದ್ದಾರೆ.
ಇನ್ನು ಸಕಲೇಶಪುರದಲ್ಲಿ ಮಳೆ ಮುಂದುವರೆದಿದ್ದು, ತಾಲ್ಲೂಕಿನ ಮಟಸಾಗರ ವ್ಯಾಪ್ತಿಯಲ್ಲಿ ಕಾಫಿತೋಟ
ಬಾಳೆ, ಅಡಿಕೆ ಹಾಗೂ ಭತ್ತದ ಗದ್ದೆಗಳು ಜಲಾವೃತವಾಗಿವೆ. ಇದರಿಂದಾಗಿ ರೈತರಿಗೆ ಭಾರೀ ನಷ್ಟವಾಗಿದ್ದು, ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದ್ದಾರೆ.