ಕೊಣಾಜೆ: ಕೊರೋನಾ ವೈರಸ್ನಿಂದಾಗಿ ಇಂದು ಇಡೀ ದೇಶವೇ ಸ್ತಬ್ದವಾಗಿದೆ. ಅಮೇರಿಕಾ, ಇಂಗ್ಲೆಂಡ್ ನಂತಹ ದೇಶಗಳೇ ಇಂದು ಕೊರೋನಾದಿಂದಾಗಿ ನಲುಗಿ ಹೋಗಿದ್ದು, ಇಂತಹ ಪರಿಸ್ಥಿತಿ ಭಾರತಕ್ಕೆ ಬರಬಾರದೆಂಬ ಉದ್ದೇಶದಿಂದ ಲಾಕ್ಡೌನ್ ಮಾಡಲಾ ಗಿದ್ದು, ಈ ನಿಟ್ಟಿನಲ್ಲಿ ದೇಶದ ನಾಗರಿಕರಿಗೆ, ಬಡವರಿಗೆ ಸಂಕಷ್ಟ. ಎದುರಾಗದಂತೆ ಹಲವಾರು ಸಮರ್ಪಕ ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೊಳಿಸುತ್ತಿವೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ಗುರವಾರ ಬಿಜೆಪಿ ಮುಖಂಡ ಸಂತೋಷ್ ಬೋಳಿಯಾರ್ ಹಾಗೂ ಉಮೇಶ್ ಗಾಂಭೀರ್ ಅವರ ನೇತೃತ್ವದಲ್ಲಿ ಬೋಳಿಯಾರ್ ಗ್ರಾಮದ ನೂರು ಮನೆಗಳಿಗೆ ಹತ್ತು ಕ್ವಿಂಟ್ವಾಲ್ ಅಕ್ಕಿ ವಿತರಿಸಿ ಅವರು ಮಾತನಾಡಿದರು.
ಸರ್ಕಾರದ ಯೋಜನೆಗಳೊಂದಿಗೆ ಹಲ ವಾರು ಸಂಘ ಸಂಸ್ಥೆಗಳು ಕೂಡಾ ಬಡವರ ಸೇವೆಯಲ್ಲಿ ತೊಡಗಿಸಿಕೊಂಡಿವೆ. ಇದೀಗ
ಸಂತೋಷ್ ಬೋಳಿಯಾರ್ ಹಾಗೂ ಉಮೇಶ್ ಗಾಂಭೀರ್ ಅವರು ಅಕ್ಕಿ ಒದಗಿ ಸುವ ಮೂಲಕ ಮಾದರಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು. ಬಿಜೆಪಿ ಮುಖಂಡ ಸಂತೋಷ್ ಬೋಳಿಯಾರ್ ಮಾತನಾಡಿ, ಲಾಕ್ ಡೌನ್ ನಿಂದಾಗಿ ಜನರಿಗೆ ಸಂಕಷ್ಟ ಎದುರಾಗಿರುವುದು ನಿಜವಾದರೂ ಆರೋಗ್ಯ ದೃಷ್ಟಿಯಿಂದ ಇದು ಅನಿವಾರ್ಯ ವಾಗಿದೆ. ಇತ್ತೀಚೆಗೆ ಬಿಜೆಪಿ ಕುರ್ನಾಡು ಮಹಾಶಕ್ತಿಕೇಂದ್ರದ ವತಿಯಿಂದ ೮೦ ಕ್ವಿಂಟ್ವಾಲ್ಗಿಂತಲೂ ಅಧಿಕ ಅಕ್ಕಿಯನ್ನು ವಿತರಿಸಲಾಗಿದ್ದು, ಇದೀಗ ಬೋಳಿಯಾರ್ ಗ್ರಾಮದ ನೂರು ಮನೆಗಳಿಗೆ ಅಕ್ಕಿ
ಯನ್ನು ವಿತರಿಸಲಾಗುತ್ತಿದೆ. ಆದ್ದರಿಂದ ಯಾರೂ ಕೂಡಾ ಮನೆಯಿಂದ ಹೊರಬಾರದೆ ಆರೋಗ್ಯ ಜಾಗೃತಿಗಾಗಿ ಪಣತೊಡೋಣ ಎಂದು ಅವರು ಹೇಳಿದರು. ಈ ಸಂದರ್ಭ ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ , ತಾಲೂಕು ಪಂಚಾಯತ್ ಸದಸ್ಯ ನವೀನ್ ಪಾದಲ್ಪಾಡಿ, ಹೇಮಂತ್ ಶೆಟ್ಟಿ , ಸುರೇಶ್ ಬಂಗೆರ , ಬೋಳಿಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಆಚಾರ್ಯ, ಎಪಿಎಂಸಿ ಸದಸ್ಯ ಪ್ರಶಾಂತ್ ಗಟ್ಟಿ , ರೋಹಿನಾಥ್, ಸುಭಾಶ್ , ಶರೀಫ್ ಬೋಳಿಯಾರ್ ಮೊದಲಾದವರು ಉಪಸ್ಥಿತರಿದ್ದರು.