ಹೊಸದಿಗಂತ ಆನ್ ಲೈನ್ ಡೆಸ್ಕ್:
ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಭಾರತೀಯರು ಬೌಲಿಂಗ್ ನಲ್ಲಿ ಮೇಲುಗೈ ಸಾಧಿಸಿದ್ದು, ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 191 ಕ್ಕೆ ಎಲ್ಲಾ ವಿಕೆಟ್ ಕಳೆದುಕೊಂಡು ಅಲೌಟ್ ಆಯಿತು. ಈ ಮೂಲಕ ಭಾರತ ತಂಡ 53 ರನ್ಗಳ ಮುನ್ನಡೆಯನ್ನು ಕಾಯ್ದಯಕೊಂಡಿದೆ.
ಎರಡನೇ ದಿನದ ಆರಂಭದಲ್ಲಿ 244 ರನ್ಗಳಿಗೆ ಭಾರತ ತಂಡ ಆಲ್ಔಟ್ ಆದ ನಂತರ ಆಸೀಸ್ ಇನ್ನಿಂಗ್ ಆರಂಭಿಸಿದ್ದು, ಮ್ಯಾಥ್ಯೂ ವೇಡ್ ಹಾಗೂ ಬರ್ನ್ಸ್ ಬುಮ್ರಾ ಬೌಲಿಂಗ್ ದಾಳಿಗೆ ವಿಕೆಟ್ ಒಪ್ಪಿಸಿದರು.
47 ರನ್ ಗಳಿಸಿ ಲಬುಶೇನ್ ವಿಕೆಟ್ ಒಪ್ಪಿಸಿದರು.ಸ್ಟೀವನ್ ಸ್ಮಿತ್ ಕೇವಲ 1 ರನ್ ಗಳಿಸಿ ಅಶ್ವಿನ್ ಗೆ ವಿಕೆಟ್ ಒಪ್ಪಿಸಿ, ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ನಂತರ ಟ್ರಾವಿಸ್ ಹೆಡ್ (7), ಮತ್ತು ಗ್ರೀನ್ (11) ವಿಕೆಟ್ ಪಡೆದ ಅಶ್ವಿನ್, ಆಸೀಸ್ ವೇಗಕ್ಕೆ ಕಡಿವಾಣ ಹಾಕಿದರು.
ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಎಚ್ಚರಿಕೆಯ ಆಟವಾಡಿದ ಟಿಮ್ ಪೈನ್ ಅರ್ಧಶತಕ ಸಿಡಿಸಿದರು. ಎರಡನೇ ರನ್ ಕದಿಯಲು ಹೋದ ಸ್ಟಾರ್ಕ್ (15) ರನ್ ಔಟ್ಗೆ ಬಲಿಯಾದರೆ , ನಾಥನ್ ಲಿಯಾನ್ (10) ಅಶ್ವಿನ್ ಬೌಲಿಂಗ್ನಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಉಮೇಶ್ ಯಾದವ್ ಎಸೆತದಲ್ಲಿ ಪೂಜಾರಗೆ ಕ್ಯಾಚ್ ನೀಡದ ಹೆಜಲ್ವುಡ್(8) ವಿಕೆಟ್ ಕಳೆದುಕೊಳ್ಳುವ ಮೂಲಕ ಆಸೀಸ್ 191 ರನ್ಗೆ ಸರ್ವಪತನ ಕಂಡಿತು. ಟೀಂ ಇಂಡಿಯಾ ಪರ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಅಶ್ವಿನ್ 4, ಉಮೇಶ್ ಯಾದವ್ 3, ಬುಮ್ರಾ 2 ವಿಕೆಟ್ ಪಡೆದು ಮಿಂಚಿದರು.