Tuesday, July 5, 2022

Latest Posts

‘ಬ್ಯಾಟರಿ ಟಾರ್ಚ್’ ಚಿಹ್ನೆಗಾಗಿ ಹೈಕೋರ್ಟ್ ಮೆಟ್ಟಿಲೇರಿದ ಕಮಲ ಹಾಸನ್‌

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕಮಲ ಹಾಸನ್ ತಮ್ಮ ಪಕ್ಷ ಮಕ್ಕಲ್ ನೀಧಿ ಮಯ್ಯಮ್​ (ಎಂಎನ್‌ಎಂ)ಪಕ್ಷಕ್ಕೆ ಬ್ಯಾಟರಿ ಟಾರ್ಚ್ ಚಿಹ್ನೆ ನೀಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಈಗಾಗಲೇ ಬ್ಯಾಟರಿ ಟಾರ್ಚ್ ಚಿಹ್ನೆಯನ್ನು ಎಂಜಿಆರ್ ಮಕ್ಕಲ್ ಕಚ್ಚಿ ಎಂಬ ಪಕ್ಷಕ್ಕೆ ಮಂಜೂರು ಮಾಡಲಾಗಿದೆ. ಹಾಗಾಗಿ ಎಂಎನ್‌ಎಂ ಈ ಬಗ್ಗೆ ಪರಿಶೀಲಿಸುವಂತೆಯೂ ಹಾಗೂ ಅದನ್ನು ಬಳಸದಂತೆ ತಡೆ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಟಾರ್ಚ್ ಚಿಹ್ನೆಯಡಿಯಲ್ಲಿ ಎಂಎನ್‌ಎಂ ಸ್ಪರ್ಧಿಸಿದ್ದರೂ ಸಹ, ಅದೇ ಚಿಹ್ನೆಯನ್ನು ಎಂಜಿಆರ್ ಮಕ್ಕಲ್ ಕಚ್ಚಿ ಪಕ್ಷಕ್ಕೂ ನೀಡಲಾಗಿತ್ತು. ಈಗ ಅದನ್ನು ತಮಗೆ ನೀಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕಮಲ್ ಹಾಸನ್ ಕಾನೂನು ಮೊರೆ ಹೋಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss