Monday, August 15, 2022

Latest Posts

ಮಂಗಳೂರು| ಬ್ಯಾರಿ ಲಿಪಿ ಕಲಿಕಾ ವಿಧಾನದ ಗ್ರಾಫಿಕ್ಸ್ ಡಿವಿಡಿ ಬಿಡುಗಡೆ

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಇತ್ತೀಚೆಗೆ ಲೋಕಾರ್ಪಣೆಗೊಂಡ ಹೊಸ ಬ್ಯಾರಿ ಲಿಪಿಯ ಕಲಿಕಾ ವಿಧಾನದ ಗ್ರಾಫಿಕ್ಸ್ ಡಿವಿಡಿ ನಗರದ ತಾಪಂ ಸಭಾಂಗಣದಲ್ಲಿ ಬುಧವಾರ ಬಿಡುಗಡೆಗೊಂಡಿತು.

ಡಿವಿಡಿ ಬಿಡುಗಡೆಗೊಳಿಸಿ ಮಾತನಾಡಿದ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಹೊಸ ಬ್ಯಾರಿ ಲಿಪಿ ರಚನೆಯ ಪ್ರಯತ್ನ ಶ್ಲಾಘನೀಯ. ಇದರಿಂದ ಕನ್ನಡ ಭಾಷೆಗೆ ಯಾವುದೇ ತೊಂದರೆಯಿಲ್ಲ. ಇದೊಂದು ಭಾವನಾತ್ಮಕ ಪ್ರಕ್ರಿಯೆಯಾಗಿದೆ. ಈ ಬಗ್ಗೆ ಟೀಕೆಗಳು ಅನಗತ್ಯ ಎಂದರು.

ಬ್ಯಾರಿ ಲಿಪಿ ಕಲಿಕೆಗೆ ವಿರೋಧ ಬೇಡ. ಕಲಿಯಲು ಆಸಕ್ತಿ ಇರುವವರಿಗೆ ಅವಕಾಶ ಮಾಡಿಕೊಡುವುದು ಅಕಾಡಮಿಯ ಜವಾಬ್ದಾರಿಯಾಗಿದೆ. ಇದನ್ನು ತಕ್ಷಣಕ್ಕೆ ಅನುಷ್ಠಾನಗೊಳಿಸಬೇಕಿಲ್ಲ. ಭವಿಷ್ಯದ ಬದಲಾವಣೆಯ ಕಾಲಘಟ್ಟದಲ್ಲಿ ಹೊಸ ಲಿಪಿಯ ಬಗ್ಗೆ ಆಸಕ್ತಿ ವಹಿಸುವ ವರ್ಗಕ್ಕೆ ಹೊಸ ಲಿಪಿ ಅನುಕೂಲವಾಗಬಹುದು. ಸದ್ಯ ಬ್ಯಾರಿ ಪಠ್ಯಪುಸ್ತಕ, ಸಾಹಿತ್ಯ ಕೃತಿಗಳು ಕನ್ನಡದಲ್ಲಿ ಮೂಡಿಬರಲಿ ಎಂದು ಆಶಿಸಿದರು.

ಬ್ಯಾರಿ ಲಿಪಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬಳಸುವ ಆಂದೋಲನಕ್ಕೆ ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಶೀರ್ ಬೈಕಂಪಾಡಿ ಚಾಲನೆ ನೀಡಿದರು. ಬ್ಯಾರಿ ಲಿಪಿ ಗ್ರಾಫಿಕ್ ಡಿಸೈನರ್ ಸಚಿನ್ ಶಾ, ಲಿಪಿ ರಚನೆಕಾರರಾದ ಅಬ್ದುರ್ರಝಾಕ್ ಅನಂತಾಡಿ, ಅಬ್ದುರ್ರಹ್ಮಾನ್ ಕುತ್ತೆತ್ತೂರು, ಡಾ. ಅಬೂಬಕರ್ ಸಿದ್ದೀಕ್, ಹೈದರ್ ಅಲಿ, ಎ.ಕೆ. ಕುಕ್ಕಿಲ, ಹಂಝ ಮಲಾರ್, ಅಬ್ದುಸ್ಸಮದ್ ಬಾವ ಪುತ್ತೂರು, ಅಕಾಡೆಮಿ ಸದಸ್ಯೆ ನಫೀಸತ್ ಮಿಸ್ರಿಯಾ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss