ಕೊರೋನಾ ವೈರೆಸ್ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಲಾಕ್ಡೌನ್ನಿಂದ ಚಿತ್ರರಂಗವೇ ಸ್ತಬ್ಧವಾಗಿದೆ. ಇದ್ದರಿಂದಾಗಿ ಅನೇಕ ಜನರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಈಗಾಗಲೇ ಸಾಕಷ್ಟು ಸಿನಿಮಾದ ಚಿತ್ರೀಕರಣ ಮುಗಿದು ರಿಲೀಸ್ ಹಂತಕ್ಕೆ ಬಂದು ನಿಂತಿದೆ. ಆದರೆ ಕೊರೋನಾ ಕಾಟದಿಂದ ಚಿತ್ರಮಂದಿರ ಬಂದ್ ಆಗಿದೆ. ಇದ್ದರಿಂದ
ಸಿನಿಮಾರಂಗದ ಮೇಲೆ ಹೊಡೆತ ಬಿದ್ದಿದೆ ಹೌದು.. ಹಾಗಂತ ಅದು ಉತ್ಸಾಹಿ ನಿರ್ಮಾಪಕರ ಸಿನಿಮಾ ಪ್ರೀತಿಯ ಮೇಲೆ ಪರಿಣಾಮ ಬೀರಿಲ್ಲ. ಎಷ್ಟೇ ಕಷ್ಟ ಇದ್ದರೂ ಚಿತ್ರರಂಗದಲ್ಲಿ ಮತ್ತೆ ಒಳ್ಳೆಯ ದಿನಗಳು ಬರುತ್ತವೆ ಎಂಬ ‘ಭರವಸೆ ಮೂಡುತ್ತಿದೆ. ಅದಕ್ಕೆ ಪೂರಕವಾಗಿ ಕೆಲವು ಹೊಸ ಹೊಸ ಸಿನಿಮಾಗಳು ಘೋಷಣೆ ಆಗುತ್ತಲೇ ಇದೆ.
ಗೋಧಿಬಣ್ಣ ಸಾ‘ಾರಣ ಮೈಕಟ್ಟು’ ಅವನೇ ಶ್ರೀಮನ್ನಾರಾಯಣ’, ಕಿರಿಕ್ ಪಾರ್ಟಿ ಮುಂತಾದ ಸಿನಿಮಾಗಳ ಮೂಲಕ ಗುರುತಿಸಿಕೊಂಡ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ಈಗ ತಮ್ಮ ಮುಂದಿನ ಚಿತ್ರ ಯಾವುದು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. ’ಬ್ರಹ್ಮರಾಕ್ಷಸ’ ಎಂಬ ಹೊಸ ಸಿನಿಮಾಗೆ ತಾವು ಬಂಡವಾಳ ಹೂಡಲಿರುವುದಾಗಿ ಅವರು ತಿಳಿಸಿದ್ದಾರೆ. ಸೆಪ್ಟೆಂಬರ್ನಿಂದಲೇ ಈ ಸಿನಿಮಾ ಸೆಟ್ಟೇರಲಿದೆ. ಈ ಹಿಂದೆ ಮಮ್ಮಿ ’ದೇವಕಿ’ ಸಿನಿಮಾಗಳ ಖ್ಯಾತಿ ಲೋಹಿತ್ ಅವರು ’ಬ್ರಹ್ಮರಾಕ್ಷಸ’ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಶೀರ್ಷಿಕೆಗೆ ತಕ್ಕಂತೆಯೇ ಹಾರರ್ ಸಿನಿಮಾ.
ತಮ್ಮ ಚೊಚ್ಚಲ ನಿರ್ದೇಶನದ ಪ್ರಿಯಾಂಕ ಉಪೇಂದ್ರ ಅಭಿನಯದ ’ಮಮ್ಮಿ’ ಸಿನಿಮಾದಲ್ಲಿಯೂ ಲೋಹಿತ್ ಹಾರರ್ ಕಥೆಯನ್ನು ಆಯ್ದುಕೊಂಡಿದ್ದರು. ಈಗ ಮೂರನೇ ಚಿತ್ರದಲ್ಲಿ ಮತ್ತೆ ಹಾರರ್ ಹಾದಿ ಹಿಡಿದಿದ್ದಾರೆ. ಹಾಗಾಗಿ ’ಬ್ರಹ್ಮರಾಕ್ಷಸ’ ಚಿತ್ರ ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಮೂಡುವಂತಾಗಿದೆ. ಅಂದಹಾಗೆ, ಆ.೪ರಂದು ಲೋಹಿತ್ ಜನ್ಮದಿನ. ಆ ಪ್ರಯುಕ್ತವೇ ಹೊಸ ಚಿತ್ರ ಘೋಷಣೆ ಆಗಿರುವುದು ವಿಶೇಷ. ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಹಾರರ್ ಸಿನಿಮಾಗಳು ಬಂದು ಹೋಗಿವೆ. ಆದರೆ ಅವೆಲ್ಲವೂಕ್ಕಿಂತಲೂ ಬ್ರಹ್ಮರಾಕ್ಷಸ ಸಿನಿಮಾ ಭಿನ್ನವಾಗಿರಲಿದೆಯಂತೆ.
ಈವರೆಗೂ ಬೇರೆ ಬೇರೆ ಪ್ರಕಾರದ ಸಿನಿಮಾ ಮಾಡಿಕೊಂಡು ಬಂದಿರುವ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಬ್ಯಾನರ್ನಲ್ಲಿ ಹಾರರ್ ಸಿನಿಮಾ ತಯಾರಾಗುತ್ತಿರುವುದು ಇದೇ ಮೊದಲು. ಚಿತ್ರಕ್ಕೆ ಪಾತ್ರವರ್ಗದ ಆಯ್ಕೆ ಇನ್ನಷ್ಟೇ ಆಗಬೇಕಿದೆ. ’ಚಿತ್ರದಲ್ಲಿ ಯಾರೆಲ್ಲ ನಟಿಸಲಿದ್ದಾರೆ ಎಂಬ ಬಗ್ಗೆ ಇನ್ನು ಕೆಲವೇ ದಿನಗಳಲ್ಲಿ ಮಾಹಿತಿ ನೀಡಲಿದ್ದೇವೆ’ ಎಂದಿದ್ದಾರೆ ಪುಷ್ಕರ್.