spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, September 28, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬ್ರಹ್ಮಾವರದ ಹೊಟೇಲೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ: ಮಳೆಯಿಂದ ತಪ್ಪಿದ ಅಪಾಯ

- Advertisement -Nitte

ಹೊಸ ದಿಗಂತ ವರದಿ, ಉಡುಪಿ:

ಜಿಲ್ಲೆಯ ಬ್ರಹ್ಮಾವರದ ಹೊಟೇಲೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಘಟನೆ ರಾತ್ರಿ ನಡೆದಿದೆ. ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರಿಂದ ಹೆಚ್ಚಿನ ಅಪಾಯ ತಪ್ಪಿದೆ.
ಬ್ರಹ್ಮಾವರ ಆಕಾಶವಾಣಿ ಸಮೀಪದ ಸಪ್ತಮಿ ಹೊಟೇಲಿನಲ್ಲಿ ಈ ಸ್ಪೋಟ ಸಂಭವಿಸಿದೆ. ಹೊಟೇಲ್ ಮಾಲೀಕರು ವ್ಯವಹಾರವನ್ನು ಮುಗಿಸಿ, ಬಾಗಿಲಿಗೆ ಬೀಗ ಹಾಕಿ ಹೋಗಿದ್ದು, ಒಳಗಡೆ ಯಾರು ಇಲ್ಲದಿರುವುದರಿಂದ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ.
ಮಳೆ ಸುರಿಯುತ್ತಿದ್ದರೂ ಬೆಂಕಿ ಧಗಧಗ ಉರಿಯುತ್ತಿತ್ತು. ಆದರೆ ಕೆನ್ನಾಲಿಗೆ ಹೊರಗೆ ವ್ಯಾಪಿಸಿಲ್ಲ. ಅಗ್ನಿ ಅವಘಡದ ಮಾಹಿತಿ ರವಾನೆಯಾಗುತ್ತಿದ್ದಂತೆ ಉಡುಪಿಯಿಂದ ಅಗ್ನಿಶಾಮಕ ದಳದ ಒಂದು ವಾಹನ ಸ್ಥಳಕ್ಕೆ ದೌಡಾಯಿಸಿತು. ಸ್ಥಳೀಯರೊಂದಿಗೆ ಸೇರಿ, ಬೆಂಕಿಯನ್ನು ನಂದಿಸಲಾಯಿತು.
ಘಟನೆಯಿಂದ ಉಂಟಾಗಿರುವ ನಷ್ಟದ ಬಗ್ಗೆ ಮಾಹಿತಿ ಲಭಿಸಿಲ್ಲ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss