Wednesday, June 29, 2022

Latest Posts

ಬ್ರಿಟನ್, ಅಮೆರಿಕ ಕೆಂಡಾಮಂಡಲ: ಕೋವಿಡ್ ಸಂಶೋಧನೆಗೆ ರಷ್ಯಾ ಕನ್ನ?

ಹೊಸದಿಲ್ಲಿ: ಕಳೆದ ಏಳು ತಿಂಗಳಿಂದ ವಿಶ್ವವನ್ನು ಪೀಡಿಸಿರುವ ಕೊರೋನಾ ಸೋಂಕು ನಿವಾರಣೆ ದಿಶೆಯಲ್ಲಿ ಔಷಧಿ ಕಂಡು ಹಿಡಿಯಲೂ ಈಗ ಭಾರಿ ಪೈಪೋಟಿ ಎದುರಾಗಿದೆ. ಇದೇ ವೇಳೆ ಬ್ರಿಟನ್, ಕೆನಡಾ ಅಮೆರಿಕ ದೇಶಗಳ ಕೋವಿಡ್ ಸಂಶೋಧನೆ ಮಾಹಿತಿಯನ್ನು ರಷ್ಯಾ ಕದ್ದಿದೆ ಎಂಬ ಗುರುತರ ಆರೋಪಕ್ಕೂ ಗುರಿಯಾಗಿದೆ.

ಭಾರತ, ಚೀನಾ ಸೇರಿದಂತೆ ಪ್ರಪಂಚದ ಮುಂದುವರಿದ ದೇಶಗಳಲ್ಲಿ ಸಂಶೋಧನೆ ನಡೆದಿದೆ. ಆಕ್ಸ್ಫರ್ಡ್, ಕೊಲಂಬಿಯಾ, ಹಾರ್ವಡ್, ಪಿಟ್ಸ್ಬರ್ಗ್ ವಿವಿಗಳಲ್ಲದೆ ಭಾರತದ ಐಐಎಸ್‌ಸಿ ಮತ್ತು ಬಯೋಕಾನ್ ಸಂಸ್ಥೆಗಳು ಈಗ ಹಗಲೂ ರಾತ್ರಿ ಕ್ಲಿನಿಕಲ್ ಪ್ರಯೋಗಗಳಲ್ಲಿ ತೊಡಗಿವೆ. ಇದರಲ್ಲಿ ಹೈದರಾಬಾದ್‌ನ ಕೆಲ ಪ್ರಮುಖ ಫಾರ್ಮಾಸ್ಯುಟಿಕಲ್ ಕಂಪನಿಗಳೂ ಮುಂಚೂಣಿಯಲ್ಲಿವೆ.

ಕೆಲವೊಂದು ದೇಶಗಳ ಸಂಶೋಧನೆ ಮೊದಲನೆ ಹಂತ ಪೂರೈಸಿದ್ದು ಎರಡನೆ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಅಣಿಯಾಗಿವೆ.

ಅಮೆರಿಕ ಮೂಲದ ಜಿಲೇಡ್ ಸೈನ್ಸ್ ಸಂಸ್ಥೆ ಈಗಾಗಲೇ ರೆಮಿಡಿಸಿವರ್ ಔಷಧಿ ಕಂಡು ಹಿಡಿದಿದ್ದು, ಇದು ಅಗ್ರರಾಷ್ಟ್ರದಲ್ಲಿ ಈಗಾಗಲೇ ಸೋಂಕಿತರ ಮೇಲೆ ಪ್ರಯೋಗ ಮಾಡಲಾಗುತ್ತಿದೆ. ಒಂದು ವಾರದ ಹಿಂದೆಯಷ್ಟೆ ರಷ್ಯಾ ಹೇಳಿಕೆಯೊಂದನ್ನು ನೀಡಿ, ಅತಿಶೀಘ್ರದಲ್ಲಿಯೇ ತಾನು ಲಸಿಕೆಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತು. ಆದರೆ ಈ ಹೇಳಿಕೆಯ ಬೆನ್ನ ಹಿಂದೆಯೇ ಯೂರೋಪ್ ಮತ್ತು ಅಮರಿಕದ ಬಹುತೇಕ ರಾಷ್ಟ್ರಗಳು ರಷ್ಯ ದೇಶದ ವಿಜ್ಞಾನಿಗಳು ತಮ್ಮ ದೇಶಗಳ ಸಂಶೋಧನೆಗಳನ್ನು ಹ್ಯಾಕ್ ಮಾಡಿದ್ದಾರೆಂದು ಪ್ರಬಲವಾಗಿಆರೋಪಿಸಿವೆ. ಆದರೆ ಈ ಆರೋಪಗಳನ್ನು ರಷ್ಯಾ ಸಾರಾಸಗಟಾಗಿ ತಳ್ಳಿ ಹಾಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss