Thursday, June 30, 2022

Latest Posts

ಸೂಪರ್ ಸ್ಪೀಡ್ ಕೊರೋನಾ: ಯುಕೆಯಿಂದ ಬೆಂಗಳೂರಿಗೆ ಮರಳಿದ ತಾಯಿ-ಮಗುವಿಗೆ ಸೋಂಕು

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬ್ರಿಟನ್ ನಲ್ಲಿ ಹೊಸ ರೂಪಾಂತರದ ಕೊರೋನಾ ಸೋಂಕು ಪತ್ತೆಯಾಗಿದ್ದು, ಇದೀಗ ಯುಕೆಯಿಂದ ಬೆಂಗಳೂರಿಗೆ ಬಂದಿರುವ ಇಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಈ ಮೂಲಕ ಲಂಡನ್ ನಿಂದ ಆಗಮಿಸಿದವರು ಕೊರೋನಾ ಹೊಸ ಪ್ರಭೇದವನ್ನು ಹೊತ್ತು ತಂದಿರುವುದು ಬಹುತೇಕ ಖಚಿತವಾಗಿದ್ದು, ರಾಜ್ಯಕ್ಕೂ ರೂಪಾಂತರ ವೈರಸ್ ಲಗ್ಗೆ ಇಟ್ಟಿರುವುದು ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ.
ಲಂಡನ್ ನಿಂದ ಡಿಸೆಂಬರ್ 19ರಂದು ಬೆಂಗಳೂರಿಗೆ ಆಗಮಿಸಿರುವ 35 ವರ್ಷದ ತಾಯಿ ಹಾಗೂ 6 ವರ್ಷದ ಮಗಳಿಗೆ ಸೋಂಕು ಪತ್ತೆಯಾಗಿದೆ. ಈಗಾಗಲೇ ಆರೋಗ್ಯ ಇಲಾಖೆ ಸಿಬ್ಬಂದಿ ಸ್ವಾಬ್ ಸಂಗ್ರಹಿಸಿದ್ದು, ಕೊರೋನಾ ರೂಪಾಂತರ ವೈರಸ್ ಪರೀಕ್ಷೆಗಾಗಿ ಪುಣೆ ಲ್ಯಾಬ್ ಗೆ ಕಳುಹಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ ಬ್ರಿಟನ್ ನಿಂದ ಬಂದ ಪ್ರಯಾಣಿಕರನ್ನು ಪರೀಕ್ಷಿಸಲಾಗಿದ್ದು, ಚೆನ್ನೈ ಹಾಗೂ ದೆಹಲಿ ವಿಮಾನ ನಿಲ್ದಾಣಗಳಲ್ಲಿ ಒಟ್ಟು ಆರು ಮಂದಿಯಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.
ಬ್ರಿಟಿಷ್ ಏರ್ ವೇಸ್ ನಿಂದ ಬಂದ 291 ಮಂದಿಯಲ್ಲಿ 49 ಮಂದಿ ಕೊರೊನಾ ಸರ್ಟಿಫಿಕೇಟ್ ಪಡೆದುಕೊಂಡಿಲ್ಲ ಹಾಗೂ ಯಾವುದೇ ಪರೀಕ್ಷೆಗೆ ಒಳಗಾಗಿಲ್ಲ. ಏರ್ ಇಂಡಿಯಾ ವಿಮಾನದಲ್ಲಿ ಬಂದ 246 ಮಂದಿಯಲ್ಲಿ 89 ಮಂದಿ ಕೊರೊನಾ ಸರ್ಟಿಫಿಕೇಟ್ ಇಲ್ಲದೇ ಬಂದಿದ್ದು, ಪರೀಕ್ಷೆಯನ್ನೂ ನಡೆಸಿಲ್ಲ ಎಂದು ವೈದ್ಯಕೀಯ ಸಚಿವ ಸುಧಾಕರ್ ಮಾಹಿತಿ ನೀಡಿದ್ದು, ಒಟ್ಟು 138 ಮಂದಿಯನ್ನು ಪತ್ತೆ ಹಚ್ಚುವ ಕೆಲಸವನ್ನು ಕೈಗೊಳ್ಳಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss