ಬ್ರಿಟನ್: ರಾಜಕುಮಾರ ಪ್ರಿನ್ಸ್ ಚಾರ್ಲ್ಸ್ ಗೆ ಕೊರೋನಾ ವೈರಸ್ ದೃಢಪಟ್ಟಿದೆ ಎಂದು ಕ್ಲಾರೆನ್ಸ್ ಹೌಸ್ ತಿಳಿಸಿದೆ.
ಪ್ರಿನ್ಸ್ ಚಾರ್ಲ್ಸ್ ಕೆಲವು ದಿನಗಳಿಂದ ಮನೆಯಲ್ಲಿಯೇ ಇದ್ದು, ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕೊರೋನಾ ವೈರಸ್ ನ ಸೌಮ್ಯ ಲಕ್ಷಣಗಳು ತೋರಿದ್ದವು, ಆದರೆ ಅವರು ಆರೋಗ್ಯವಾಗಿಯೇ ಇದ್ದಾರೆ.
ಕಮಿಲ್ಲಾ ಕಾರ್ನ್ ವಾಲ್ ನ ರಾಜಕುಮಾರಿಗೂ ಕೊರೋನಾ ಪರೀಕ್ಷೆ ನಡೆದಲಾಗಿದ್ದು, ಅವರಿಗೆ ಸೋಂಕು ತಗುಲಿಲ್ಲವೆಂಬ ವರದಿ ಬಂದಿದೆ. ಸರ್ಕಾರ ಮತ್ತು ವೈದ್ಯರ ಸಲಹೆ ಮೇರೆಗೆ ಅವರನ್ನು ಸ್ಕಾಟ್ ಲ್ಯಾಂಡ್ ನ ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ.
ಈ ಪರೀಕ್ಷೆಗಳನ್ನು ಅಬರ್ಡೀನ್ ಶೇನ್ ನಲ್ಲಿರುವ ಎನ್.ಹೆಚ್.ಎಸ್ ನಲ್ಲಿ ನಡೆಯಿತು. ಪರೀಕ್ಷೆಗೆ ಅಗತ್ಯವಾದ ಮಾನದಂಡಗಳನ್ನು ಪೂರೈಸಲಾಯಿತು.