Sunday, August 14, 2022

Latest Posts

ಬ್ಲ್ಯಾಕ್ ಪ್ಯಾಂಥರ್ ಖ್ಯಾತಿಯ ನಟ ಜಾಡ್‌ವಿಕ್ ಬೋಸ್‌ಮನ್ ನಿಧನ

ವಾಷಿಂಗ್ಟನ್: ಬ್ಲಾಕ್ ಪ್ಯಾಂಥರ್ ಖ್ಯಾತಿಯ ಹಾಲಿವುಡ್ ಹೀರೋ ಜಾಡ್‌ವಿಕ್ ಬೋಸ್‌ಮನ್ ನಿಧನರಾಗಿದ್ದಾರೆ.
ತೀವ್ರ ಅನಾರೋಗ್ಯದಿಂದ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಬೋಸ್‌ಮನ್ ಅವರು ತಮ್ಮ ನಿವಾಸದಲ್ಲಿಯೇ ಕೊನೆಯುಸಿರೆಳೆದಿದ್ದು, ಅಪಾರ ಮಂದಿ ಫ್ಯಾನ್‌ಗಳ ಕಣ್ಣೀರಿಗೆ ಕಾರಣರಾಗಿದ್ದಾರೆ.
ದೊಡ್ಡ ಕರುಳಿನ ಕ್ಯಾನ್ಸರ್ ಇವರನ್ನು ನಾಲ್ಕು ವರ್ಷಗಳಿಂದ ಬಾಧಿಸುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಕ್ಯಾನ್ಸರ್ ಇದ್ದರೂ ಸಹ ಬೋಸ್‌ಮನ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರು. ಯಾರಿಗೂ ಈ ಬಗ್ಗೆ ಹೇಳುತ್ತಿರಲಿಲ್ಲ.ದ ಎಕ್ಸ್‌ಪ್ರೆಸ್,ದ ಕಿಲ್ ಹೋಲ್, 42, ಡ್ರಾಫ್ಟ್ ಡೇ,ಗಾಡ್ಸ್ ಆಫ್ ಈಜಿಪ್ಟ್, ಕ್ಯಾಪ್ಟನ್ ಅಮೆರಿಕಾ, ಮಾರ್ಷಲ್ ಹಾಗೂ ಬ್ಯಾಕ್ ಪ್ಯಾಂಥರ್ ಸಿನಿಮಾಗಳಲ್ಲಿ ಅಭಿನಯಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss