ಹೊಸದಿಗಂತ ವರದಿ,ರಾಮನಗರ
ಹಿಂದುಳಿಗೆ ತುಳಸಿ ಗಿಡ ಎಂದರೆ ಅತ್ಯಂತ ಪವಿತ್ರವಾದ ಗಿಡವಾಗಿದ್ದು ತುಳಸಿ ಗಿಡಕ್ಕೆ ತನ್ನದೆ ಆದ ವೈಶಿಷ್ಟ ಹೊಂದಿದ್ದು ಶ್ರೀ ಕೃಷ್ಣನ ಕಾಲದಿಂದಲೂ ತುಳಸಿಗೆ ಎಲ್ಲಾ ಗಿಡಕ್ಕಿಂತ ಶ್ರೇಷ್ಠವಾದ ಸ್ಥಾನವನ್ನು ನೀಡಲಾಗಿದೆ ಎಂದು ಮಾಗಡಿ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಅರ್ಚಕ ವೆಂಕಟೇಶ್ ಅಯ್ಯಂಗಾರ್ ಹೇಳಿದರು.
ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಂದ 108 ತುಳಸಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾಗಡಿ ಶ್ರೀ ರಂಗನಾಥಸ್ವಾಮಿ ದಏವಸ್ಥಾನದಲ್ಲಿ ಪ್ರತಿ ದಿನವು ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಬೆಳಗ್ಗೆ ಮತ್ತು ಸಂಜೆ ತಿರು ಆರಾಧನೆಗೆ ತುಳಸಿ ಬೇಕಾಗಿರುವುದರಿಂದ ಭಕ್ತರೆ ಭಕ್ತರೆ ತುಳಸಿ ಗಿಡ ತಂದು ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಬೆಳಸಲಾಗುತ್ತಿದ್ದು ಇದರ ನಿರ್ವಹಣೆಯನ್ನು ದೇವಸ್ಥಾನದ ವತಿಯಿಂದ ಮಾಡಲಾಗುತ್ತದೆಈಗ ಸಾಂಕೇತಿಕವಾಗಿ 108 ತುಳಸಿ ಗಿಡವನ್ನು ನೆಡಸಲಾಗಿದ್ದು ಮುಂದೆ ಭಕ್ತರ ನೆರವಿನಿಂದ 500 ಕ್ಕೂ ಹೆಚ್ಚು ಗಿಡವನ್ನು ನೆಡೆಸಿ ರಂಗನ ಸೇವೆಗೆ ಬಳಸಲಾಗುತ್ತದೆ.
ರಂಗನಾಥಸ್ವಾಮಿ ಪೂಜಾ ಕೈಂಕರ್ಯಕ್ಕೆ ಸಹಾಯ ಮಾಡಿದ ಭಕ್ತರಿಗೆ ದೇವಸ್ಥಾನದ ವತಿಯಿಂದ ಕೃತಜ್ಞತೆ ತಿಳಿಸಲಾಗುತ್ತದೆಂದು ತಿಳಿಸಿದರು. ಬೆಂಗಳೂರಿನಿoದ ಹಲವು ಭಕ್ತರು ಬಂದು ಸ್ವಯಂ ಪ್ರೇರಿತರಾಗಿ ತುಳಸಿ ಗಿಡ ತಂದು ನೆಡಲಾಯಿತು, ಮಾಗಡಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ತುಳಸಿ ಗಿಡ ನೆಡಲು ಸಹಕಾರ ನೀಡಿದರು. ಶ್ರೀ ರಂಗನಾಥಸ್ವಾಮಿಯ ಕಲ್ಯಾಣಿ ಪಕ್ಕದಲ್ಲಿ ತುಳಸಿ ಗಿಡಗಳನ್ನು ಬೆಳಸಲಾಗುತ್ತದೆ. ಸಸಿ ನೆಡುವ ಕಾರ್ಯಕ್ರಮದಲ್ಲಿ ದೇವಸ್ಥಾನದ ಅರ್ಚಕರು, ಪಾರುಪತ್ತೇದಾರರು ಸೇರಿಂತೆ ಸಿಬ್ಬಂದಿಗಳು ಭಾಗವಹಿಸಿದ್ದರು.