Saturday, August 13, 2022

Latest Posts

ಭಗತ್‍ಸಿಂಗ್ ಜನ್ಮದಿನಾಚರಣೆ : ಭಗತ್‍ಕ್ರಾಂತಿ ಪಡೆ ಕಾರ್ಯಕರ್ತರಿಂದ ರಕ್ತದಾನ

ಮಂಡ್ಯ: ಭಗತ್‍ಕ್ರಾಂತಿಪಡೆ ಕಾರ್ಯಕರ್ತರು ಭಾರತದ ಕ್ರಾಂತಿಕಾರಿ ನಾಯಕ ಭಗತ್‍ಸಿಂಗ್ ಅವರ 113ನೇ ಜನ್ಮ ದಿನದ ಅಂಗವಾಗಿ ನಗರದ ಮಿಮ್ಸ್ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಮಾಡುವ ಮೂಲಕ ವಿಶೇಷವಾಗಿ ಆಚರಿಸಿದರು.
ಭಗತ್‍ಕ್ರಾಂತಿಪಡೆ ರಾಜ್ಯಾಧ್ಯಕ್ಷ ಉಮೇಶ್‍ಚಂದ್ರ ಮಾತನಾಡಿ, ಭಾರತದಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಗೊತ್ತಿರುವ ಕ್ರಾಂತಿಕಾರಿ ನಾಯಕ ಎಂದರೆ ಅದು ಭಗತ್ ಸಿಂಗ್ ಅಲ್ಲದೇ ಮತ್ಯಾರೂ ಅಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿ ಭಗತ್‍ಸಿಂಗ್ ಅವರ ಪಾತ್ರ ಬಹಳ ಮಹತ್ವದ್ದಾಗಿದೆ. ಬ್ರಿಟಿಷರ ವಿರುದ್ಧ ಎದೆಗುಂದದೆ ಹೋರಾಡಿ ತನ್ನ 23ನೇ ವಯಸ್ಸಿನಲ್ಲೇ ವೀರಮರಣ ಹೊಂದಿದರು ಎಂದು ಬಣ್ಣಿಸಿದರು.
ಇಂತಹ ವೀರ ಸೇನಾನಿಯ ಹೆಸರಿನಲ್ಲಿ ನಮ್ಮ ಕಾರ್ಯಕರ್ತರು ರಕ್ತದಾನ ಮಾಡುತ್ತಿದ್ದೇವೆ. ಕೋವಿಡ್-19 ಸಂದರ್ಭದಲ್ಲಿ ರೋಗಿಗಳಿಗೆ ರಕ್ತದ ಅಭಾವ ಕಾಣಿಸಿಕೊಂಡಿದ್ದು, ಇದನ್ನು ಮನಗಂಡು ನಮ್ಮೆಲ್ಲಾ ಕಾರ್ಯಕರ್ತರು ಭಗತ್‍ಸಿಂಗ್ ಜನ್ಮದಿನಾಚರಣೆಯನ್ನು ರಕ್ತದಾನ ಮಾಡುವ ಮೂಲಕ ಆಚರಿಸುತ್ತಿದ್ದೇವೆ ಎಂದರು.
ಸುಮಾರು 50ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರೋಗಿಗಳಿಗೆ ರಕ್ತದಾನ ಮಾಡಿದ್ದೇವೆ. ಆ ಮೂಲಕ ರಾಷ್ಟ್ರ ಪ್ರೇಮವನ್ನು ತೋರ್ಪಡಿಸಿದ್ದೇವೆ ಎಂದು ತಿಳಿಸಿದರು.
ಮುಖಂಡರಾದ ಜಿಲ್ಲಾಧ್ಯಕ್ಷ ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಣ್ಣ ಮಲ್ಲಪ್ಪ, ಅಭಿಷೇಕ್, ನೃಪತುಂಗ, ಲಂಕೇಶ್, ವಸಂತ್‍ಕುಮಾರ್, ರಾಜೇಶ್ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss