ಹೊಸ ದಿಗಂತ ವರದಿ, ಚಾಮರಾಜನಗರ:
ಹಿಂದು ಧರ್ಮ ಹಾಗು ಹಿಂದು ದೇವತೆಗಳ ಬಗ್ಗೆ ಅವಹೇಳನ ಮಾಡುತ್ತಿದ್ದ ಪ್ರೊ. ಕೆ.ಎಸ್. ಭಗವಾನ್ ಮುಖಕ್ಕೆ ಮಸಿ ಹಾಕಿದ
ವಕೀಲೆ ಮೀರಾ ರಾಘವೇಂದ್ರ ಪರ ಚಾ.ನಗರದಲ್ಲಿ ಶಿವಾಜಿ ನೇತಾಜಿ ಸೇನ ಸಮಿತಿಯ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಂಭ್ರಮಿಸಿದರು.
ನಗರದ ಚಾಮರಾಜೇಶ್ವರ ದೇವಸ್ತಾನದ ಮುಂಭಾಗ ಸಮಾವೇಶಗೊಂಡ ಸೇನಾ ಸಮಿತಿಯ ಪದಾಧಿಕಾರಿಗಳು ಮೀರಾ ಪರ ಜೈಕಾರ ಹಾಕಿದರು. ಬಳಿಕ ಮೀರಾಭಾವಚಿತ್ರಕ್ಕೆ ಕ್ಷೀರಾಭೀಷೇಕ ಮಾಡಿದರು. ಹಿಂದು ವಿರೋಧಿಗಳಿ ಗೆ ಮೀರಾ ರಾಘವೇಂದ್ರ ಮಾಡಿರುವ ಕೃತ್ಯ ಎಚ್ಚರಿಕೆಯ ಗಂಟೆಯಾಗಿದೆ ಎಂದರು.
ಈ ಸಂದರ್ಭ ಮಾತನಾಡಿದ, ನೇತಾಜಿ ಸೇನಾ ಸಮಿತಿಯ ಕಾರ್ಯದರ್ಶಿ ಕೃಷ್ಣ, ಮೀರಾ ಅವರು ಕಿತ್ತೂರಾಣಿ ರಾಣಿ ಚಿನ್ನಮ್ಮ ನಾಗಿದ್ದಾರೆ. ಅಂದು ಬ್ರೀಟಿಷರ ವಿರುದ್ದ ಹೋರಾಟ ಮಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದರು. ಇಂದು ಹಿಂದು ದೇವತೆಗಳ ಬಗ್ಗೆ ಅವಹೇಳನವಾಗಿ ಮಾತನಾಡುವ ಇಂಥ ದೇಶದ್ರೋಹಿಗಳಿಗೆ ಮೀರಾ ಅವರು ತಕ್ಕಶಾಸ್ತ್ರಿ ಮಾಡಿದ್ದಾರೆ. ಇನ್ನಾದರು ಭಗವಾನ್ ಎಚ್ಚೆತ್ತು ಕೊಂಡು ಹಿಂದು ದೇವರು ಹಾಗೂ ದೇವತೆಗಳ ವಿರುದ್ದ ಮಾತನಾಡುವುದನ್ನು ನಿಲ್ಲಿಸಬೇಕು. ಹಿಂದುಗಳ ಭಾವನೆಗಳನ್ನು ಕೆರಳಿಸುವಂತಹ ಕೆಲಸ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ, ಶಿವಾಜಿ ನೇತಾಜಿ ಸೇನಾ ಸಮಿತಿಯ ಅಧ್ಯಕ್ಷ ಆರ್. ಸುಂದರರಾಜ್, ನಗರಸಭಾ ಸದಸ್ಯರಾದ ಶಿವರಾಜು, ರಾಘವೇಂದ್ರ, ಮನೋಜ್ ಪಟೇಲ್, ಮುಖಂಡರಾದ ಚಂದ್ರಶೇಖರ್ ರಾವ್, ಮಾರ್ಕೇಟ್ಕುಮಾರ್, ಕೂಸಣ್ಣ, ಮಹೇಶ್ ಮೊದಲಾದವರು ಇದ್ದರು.