ಭಟ್ಕಳಕ್ಕೆ ನೆಮ್ಮದಿ ತಂದ ಸೋಮವಾರ!

0
238

ಕಾರವಾರ: ಕಳೆದ ನಾಲ್ಕು ದಿನಗಳಿಂದ ಒಂದೇ ಸಮನೆ ಕೊರೋನಾ ಪ್ರಕರಣಗಳನ್ನು ಕಂಡು ಕಂಗಾಲಾಗಿದ್ದ ಭಟ್ಕಳ ಮತ್ತು ಉ.ಕ ಜಿಲ್ಲೆಯ ಜನತೆಗೆ ಸೋಮವಾರ ಬೆಳಿಗ್ಗೆ ಆರೋಗ್ಯ ಇಲಾಖೆ ಹೊರಡಿಸಿರುವ ಬುಲೆಟಿನ್ ನಲ್ಲಿ ಒಂದೂ ಕೇಸ್ ಬಾರದಿರುವುದು ತುಸು ನಿರಾಳತೆಗೆ ಕಾರಣವಾಗಿದೆ.

ಸೋಮವಾರದ ಹೆಲ್ತ್ ಬುಲೆಟಿನ್ ಹೊಸ 10 ಪ್ರಕರಣಗಳನ್ನು ಪ್ರಕಟಿಸಿದ್ದು, ಇದರಲ್ಲಿ ಭಟ್ಕಳದ ಒಂದೂ ಪ್ರಕರಣ ಇಲ್ಲ. ಆದರೂ ಸಂಜೆ ಬುಲೆಟಿನ್ ನತ್ತ ಸಹಜವಾಗಿ ಕುತೂಹಲ ಇದ್ದೇಇದೆ.

ಭಟ್ಕಳದ ಸೋಂಕಿತ ರಿಕ್ಷಾವಾಲಾ ತಲೆಬೇನೆ ತಂದಿದ್ದು, ಈತನ ಸಂಪರ್ಕದ ಹಲವರ ಗಂಟಲ ದ್ರವ ಪರೀಕ್ಷಾ ಹಂತದಲ್ಲಿದ್ದು, ಇದು ಇನ್ಯಾವ ತಲೆಬೇನೆ ತರಲಿದೆ ಎನ್ನುವುದು ಕುತೂಹಲ ತಂದಿದೆ.

ಈ ಮಧ್ಯೆ ಜಿಲ್ಲಾ ಆರೋಗ್ಯ ಇಲಾಖೆ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಈಗಾಗಲೇ ದಾಖಲಾಗಿರುವ ಎಲ್ಲ ಸೋಂಕಿತರ ಆರೋಗ್ಯ ಸ್ಥಿರವಾಗಿದ್ದು, ಎಲ್ಲರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದಿದೆ. ಈ ಎಲ್ಲ ಬೆಳವಣಿಗೆಯ ಮಧ್ಯೆ ಸೋಂಕಿತರಿಗೆ ಕಾರವಾರದಲ್ಲಿ ಚಿಕಿತ್ಸೆ ನೀಡುತ್ತಿರುವುದಕ್ಕೆ ವಿರೋಧ ಹೆಚ್ಚುತ್ತಿದ್ದು, ಶಾಸಕಿ ರೂಪಾಲಿ ನಾಯ್ಕ ಸಹ ಇವರೆಲ್ಲರಿಗೆ ನೌಕಾನೆಲೆಯ ಐ.ಎನ್.ಎಸ್. ಪತಂಜಲಿ ಆಸ್ಪತ್ರೆ ಅಥವಾ ಭಟ್ಕಳದಲ್ಲೇ ಚಿಕಿತ್ಸೆ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಿದ್ದಾರೆ. ಈಗಾಗಲೇ ಮಾಜಿ ಶಾಸಕ ಸತೀಶ ಸೈಲ್ ಸಹ ಇದೇ ಬೇಡಿಕೆ ಮುಂದಿಟ್ಟಿದ್ದರು.

LEAVE A REPLY

Please enter your comment!
Please enter your name here