ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಭಟ್ಕಳದಲ್ಲಿದ್ದ ಪಾಕಿಸ್ತಾನಿ ಮಹಿಳೆಗೆ ನೆರವಾದವರಿಗೆ ಹೆಡೆಮುರಿ ಕಟ್ಟಬೇಕು: ಬಿಜೆಪಿ ಜಿಲ್ಲಾ ವಕ್ತಾರ ನ್ಯಾಯವಾದಿ ನಾಗರಾಜ ನಾಯಕ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಕಾರವಾರ:

ಪಡಿತರ ಚೀಟಿ, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಪಡೆದು ಪಾಕಿಸ್ತಾನಿ ಮಹಿಳೆಯೊಬ್ಬಳು 2015 ರಿಂದಲೇ ಭಟ್ಕಳದಲ್ಲಿ ಇದ್ದಾಳೆ ಎನ್ನುವುದು ಆಘಾತಕಾರಿ ಎಂದು ಬಿಜೆಪಿ ಜಿಲ್ಲಾ ವಕ್ತಾರ ನ್ಯಾಯವಾದಿ ನಾಗರಾಜ ನಾಯಕ ತಿಳಿಸಿದ್ದಾರೆ.
ಆಧಾರ್ ಕಾರ್ಡ್ ಮಾಡುವಾಗ ಜನ್ಮ ದಾಖಲೆ, ರೆಸಿಡೆನ್ಸಿಯಲ್ ಪತ್ರ ಬೇಕಾಗುತ್ತದೆ. ಭಟ್ಕಳದಲ್ಲಿ ನೆಲೆಸಿದ ಪಾಕಿಸ್ತಾನಿ ಮಹಿಳೆ ಈ ದಾಖಲೆಗಳನ್ನು ಎಲ್ಲಿಂದ ತಂದಳು, ಆಕೆಗೆ ನೆರವಾದ ವ್ಯಕ್ತಿಗಳ ಹೆಡೆಮುರಿ ಕಟ್ಟಬೇಕಿದೆ. ಚುನಾವಣಾ ಗುರುತಿನ ಚೀಟಿ ಪಡೆಯಲು ಈ ಹಿಂದೆ ಎಲ್ಲಿ ಚುನಾವಣಾ ಗುರುತಿನ ಚೀಟಿ ಇತ್ತು, ಅಲ್ಲಿ ಅದನ್ನು ತೆಗೆದುಹಾಕಿದ ಬಗ್ಗೆ ಧಾಖಲೆ ತಂದು ಕೊಟ್ಟರೆ ಮಾತ್ರ ಇಲ್ಲಿ ಹೊಸ ಗುರುತಿನ ಚೀಟಿ ನೀಡಬಹುದು. ಈ ಹೊಸ ಗುರುತಿನ ಚೀಟಿ ಪಡೆಯಲು ನಿಯಮಗಳನ್ನು ಸರಿಯಾಗಿ ಪಾಲಿಸಲಾಗಿದೆಯೇ, ಇವೆಲ್ಲಾ ಕಾರ್ಡಗಳನ್ನು ಕೊಡುವಾಗ ಸ್ಥಳೀಕ ಚವಕಾಶಿ ಮಾಡಲಾಗಿದೆಯೇ, ಮಾಡಿದ್ದರೆ ಯಾರನ್ನೆಲ್ಲ ಮಾಡಿದ್ದಾರೆ ಎಂಬ ಬಗ್ಗೆ ಸಮಗ್ರ ತನಿಖೆ ಆಗಲೇ ಬೇಕು.
ಜಿಲ್ಲೆಯಲ್ಲೂ ಬಾಂಗ್ಲಾ ಅಕ್ರಮ ವಲಸಿಗರೂ, ರೋಹಿಂಗ್ಯಾಗಳೂ ಅಕ್ರಮವಾಗಿ ನೆಲೆಸಿರುವ ಸಾಧ್ಯತೆ ಖಂಡಿತಾ ಇದೆ. ಇದರ ಕುರಿತು ಸಮಗ್ರ ತನಿಖೆ ಆಗಬೇಕು. ಆಧಾರಕಾರ್ಡ್,ಚುನಾವಣಾ ಗುರುತಿನ ಚೀಟಿ ಪಡೆಯುವಾಗ ಹೆಚ್ಚಿನ ಕಾಳಜಿ ಮತ್ತು ತಾಂತ್ರಿಕತೆಗಳನ್ನು ಪೂರೈಸಬೇಕು ಎಂದು ಆಗ್ರಹಿಸಿದ್ದಾರೆ.
ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನಿ ಮಹಿಳೆಯನ್ನು ಭಂದಿಸಿದ ಪೊಲೀಸರು ಅಭಿನಂದನೆಗೆ ಅರ್ಹರು ಮತ್ತು ಹೀಗೆ ನೆಲೆಸಿರುವ ಇತರ ಅಕ್ರಮವಾಸಿಗಳನ್ನು ಬಗ್ಗು ಬಡಿಯಬೇಕು ಎಂದು ವಕ್ತಾರ ನಾಗರಾಜ ನಾಯಕ ಆಗ್ರಹಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss