Thursday, July 7, 2022

Latest Posts

ಭಟ್ಕಳದಲ್ಲಿ ಮತ್ತೆ ಕೊರೋನಾ ರಣಕೇಕೇ: ಮತ್ತೆ ಏಳು ಪಾಸಿಟಿವ್ 

ಕಾರವಾರ : ಭಟ್ಕಳದಲ್ಲಿ ಕೊರೋನಾ ರಣಕೇಕೇ ಹಾಕುತ್ತಿದ್ದು ಭಾನುವಾರ ಆಟೋ ಚಾಲಕ ಸೇರಿದಂತೆ ಹೊಸ ಏಳು ಜನರಲ್ಲಿ ಸೋಂಕು ಪತ್ತೆಯಾಗಿವೆ.

ಇದರಿಂದಾಗಿ ಭಟ್ಕಳದಲ್ಲಿ ಈಗ ಸಕ್ರೀಯ ಪ್ರಕರಣಗಳು 28ಕ್ಕೆ ಏರಿದೆ. ಮೊದಲ ಹಂತದ 11 ಪ್ರಕರಣಗಳು ಸೇರಿ ಭಟ್ಕಳದಲ್ಲಿ 39 ಪ್ರಕರಣಗಳು ದಾಖಲಾದಂತಾಗಿದ್ದು, ಇಡೀ ಜಿಲ್ಲೆ ಈಗ ಅಗ್ನಿಕುಂಡದ ಮೇಲೆ ನಿಂತಂತಾಗಿದೆ. ಭಾನುವಾರದ ೇಳು ಪ್ರಕರಣಗಳಲ್ಲಿ ನಾಲ್ವರು ಸೆಕಂಡರಿ ಸಂಪರ್ಕದಿಂದ ಬಂದಿರುವುದು ತೀವ್ರ ಆಘಾತಕ್ಕೆ ಕಾರಣವಾಗಿದೆ.

ಭಾನುವಾರದ ಪ್ರಕರಣಗಳು ಸಹ ಮೊದಲ ಸೋಂಕಿತ ಮೂಲದಿಂದಲೇ ಬಂದಿದ್ದಾಗಿದೆ. ಎಲ್ಲ ಏಳೂ ಜನ ಸಿಲ್ ಡೌನ್ ಪ್ರದೇಶದಿಂದಲೇ ಬಂದವರಾಗಿದ್ದಾರೆ. ಭಾನುವಾರ ದೃಢಪಟ್ಟ ಎಲ್ಲ ಏಳು ಸೋಂಕಿತರನ್ನು ಕಾರವಾರ ವೈದ್ಯಕೀಯ ಕಾಲೇಜಿನ ಕೋವಿಡ್ -19 ವಾರ್ಡಿಗೆ ದಾಖಲಿಸಲಾಗುತ್ತಿದೆ.

ಆಟೋ ಚಾಲಕನ ಚಿಂತೆ !

ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆ ಮೂಲದಿಂದಲೇ ಹೊಸ 28 ಪ್ರಕರಣಗಳು ಬರುವಂತಾಗಿದ್ದು, ಆಸ್ಪತ್ರೆಗೆ ಹೋಗಿ ಬಂದ 18 ದಿನಗಳ ನಂತರದಲ್ಲಿ ಈ ಪ್ರಕರಣಗಳು ಹೊರ ಬರತೊಡಗಿವೆ. ಭಾನುವಾರ ದೃಢಪಟ್ಟವರಲ್ಲಿ ಆಟೋ ಚಾಲಕನೂ ಸೇರಿದ್ದು, ಈತ 18 ದಿನಗಳ ಕಾಲ ಯಾರೆಲ್ಲ ಪ್ರಯಾಣಿಕರ ಜೊತೆ ಸಂಪರ್ಕ ಹೊಂದಿದ್ದ ಎನ್ನುವ ಸಂಗತಿ ತೀವ್ರ ಭೀತಿಗೆ ಕಾರಣವಾಗಿದೆ. ಆಟೋ ಚಾಲಕನ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದವರಿಗೆ ಸೋಂಕು ಬರುವ ಸಾಧ್ಯತೆಯಿದ್ದು, ಇದನ್ನು ಪತ್ತೆ ಹಚ್ಚುವುದು ಈಗ ಜಿಲ್ಲಾಡಳಿತಕ್ಕೆ ತಲೆಬೇನೆ ಆಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss