Saturday, June 25, 2022

Latest Posts

ಭಟ್ಕಳ| KA.47- 3427 ಆಟೋದಲ್ಲಿ ಸಂಚರಿಸಿದ್ದೀರಾ? ಹಾಗಿದ್ದರೆ ಸ್ವಯಂ ಪ್ರೇರಣೆಯಿಂದ ಮಾಹಿತಿ ಕೊಡಿ ಎಂದ ಆಡಳಿತ

ಭಟ್ಕಳ : ಭಟ್ಕಳದ ಸೋಂಕಿತ ರಿಕ್ಷಾ ಚಾಲಕ ನಗರದಲ್ಲಿ ಕೊರೋನಾ ಪೀಡೆ ಹಬ್ಬಿಸುತ್ತಿರುವುದು ಬಹುತೇಕ ಖಚಿತವಾಗಿದ್ದು ಈಗ ತಾಲೂಕು ಆಡಳಿತ ಈತನ ರಿಕ್ಷಾದಲ್ಲಿ ಸಂಚರಿಸಿದವರ ಮಾಹಿತಿ ಕೇಳಿದೆ.
ಭಟ್ಕಳದ ಸಹಾಯಕ ಆಯುಕ್ತರು ಭಾನುವಾರ ಸಂಜೆ ತುರ್ತು ಪ್ರಕಟಣೆಯೊಂದನ್ನು ಹೊರಡಿಸಿದ್ದು KA.47- 3427 ನೋಂದಣಿ ರಿಕ್ಷಾ ಚಾಲಕನಿಗೆ ಸೋಂಕು ದೃಡಪಟ್ಟಿದ್ದು ಈ ಆಟೋದಲ್ಲಿ ಕಳೆದ 14 ದಿನಗಳಲ್ಲಿ ಸಂಚರಿಸಿದವರು ಅಥವಾ ಈ ರಿಕ್ಷಾ ಚಾಲಕನ ಸಂಪರ್ಕಕ್ಕೆ ಬಂದವರು ತಕ್ಷಣ ಸ್ವಯಂ ಪ್ರೇರಣೆಯಿಂದ ಮಾಹಿತಿಯನ್ನು ತಾಲೂಕು ಆಸ್ಪತ್ರೆಗೆ ಅಥವಾ ಸಹಾಯವಾಣಿ ಸಂಖ್ಯೆ 08385- 226422 ಕ್ಕೆ ಸಂಪರ್ಕಿಸಲು ಕೋರಿದ್ದಾರೆ.
ತಾಲೂಕು ಆಡಳಿತ ಈ ಮಾಹಿತಿ ಕಲೆ ಹಾಕುತ್ತಿದ್ದು, ಈಗಾಗಲೇ ರಿಕ್ಷಾ ಪ್ರಯಾಣ ಮಾಡಿದ ಆರು ಜನರನ್ನು ಪತ್ತೆ ಹಚ್ಚಲಾಗಿದೆ. ಈ ಆರೂ ಜನ ಸಂಪರ್ಕ ಹೊಂದಿದವರೂ ಮುಖ್ಯವಾಗಲಿದ್ದು, ಈ ಮಾಹಿತಿ ಸಂಗ್ರಹವೂ ಶುರುವಾಗಿದೆ.
ಸೋಮವಾರದ ಹೆಲ್ತ್ ಬುಲೆಟಿನ್ ನತ್ತ ಈಗ ಎಲ್ಲರ ದೃಷ್ಟಿ ನೆಟ್ಟಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss