Wednesday, July 6, 2022

Latest Posts

ಭತ್ತಕ್ಕೆ ಸೂಕ್ತ ಬೆಲೆ ಸಿಗದೇ ರೈತ ಕಂಗಾಲು ಸಾಗಾಣಿಕೆ, ಮಾರಾಟ ಸಮಸ್ಯೆಯಿಂದ ಖರೀದಿಗೆ ನಿರುತ್ಸಾಹ 

• ದುರ್ಗಾಪ್ರಸಾದ.ಎನ್.ಕೆ
ಕೆಂಭಾವಿ: ಸುರಪುರ ತಾಲ್ಲೂಕಿನಾದ್ಯಾಂತ ರೈತರು ಬೆಳೆದ ಭತ್ತದ ಬೆಳೆಯ ಖರೀದಿಸಲು ಸಾಗಾಣಿಕೆ ಮತ್ತು ಮಾರಾಟ ಸಮಸ್ಯೆ ಇರುವದರಿಂದ ವ್ಯಾಪಾರಸ್ಥರು ನಿರುತ್ಸಾಹ ತೋರುವುದರಿಂದ ಭತ್ತ ಬೆಳೆದ ರೈತ ಮಾರಾಟ ಮಾಡಲು ಪರದಾಡುವಂತಾಗಿದೆ.
ಈ ಭಾರಿ ಉತ್ತಮ ಮಳೆಯಾಗಿ ನಾರಾಯಣಪುರ ಜಲಾಶಯದಲ್ಲಿ ಸಾಕಷ್ಟು ನೀರಿನ ಪ್ರಮಾಣ ಲಭ್ಯತೆ ಇದ್ದರಿಂದ ಎರಡನೇ ಬೆಳೆಗೆ ನೀರು ಹರಿಸಿದ್ದು ರೈತರು ಕೈಸಾಲ ಮಾಡಿ ರಸಗೊಬ್ಬರಗಳನ್ನು ಖರೀದಿಸಿ, ಉತ್ಸಾಹದಿಂದ ಸಾಕಷ್ಟು ಖರ್ಚು ಮಾಡಿ ಭತ್ತದ ಬೆಳೆಯನ್ನು ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ಕೆಲ ದಿನಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದ ಸುರಪುರ ವ್ಯಾಪ್ತಿಯಲ್ಲಿ ಬೆಳೆದ ಭತ್ತವನ್ನು ನೆಲಕಚ್ಚಿಸಿದೆ. ಇದರಿಂದ ಹಾನಿಗೊಳಗಾಗಿದ್ದ ರೈತರು ಕಂಗಾಲಾಗಿದ್ದಾರೆ. ಇನ್ನುಳಿದ ಬೆಳೆಯನ್ನಾದರೂ ಸಿಕ್ಕ ಬೆಲೆಗೆ ಮಾರಾಟ ಮಾಡೋಣ ಎಂದರೆ ವ್ಯಾಪಾರಸ್ಥರು ನಿರುತ್ಸಾಹ ತೋರುತ್ತಿರುವುದರಿಂದ ರೈತರನ್ನು ಚಿಂತೇಗೀಡು ಮಾಡುವಂತಾಗಿದೆ.
ರಾಶಿ ಯಂತ್ರಕ್ಕೆ ದುಬಾರಿ ಬೆಲೆ 
ತಮಿಳುನಾಡು, ಆಂಧ್ರಪದೇಶ, ಮಹಾರಾಷ್ಟç, ಗಂಗಾವತಿ, ಸಿಂಧನೂರ ಸೇರಿದಂತೆ ಮತ್ತಿತರ ಭಾಗಗಳಿಂದ ರಾಶಿ ಯಂತ್ರಗಳು ಬರುತ್ತಿದ್ದವು. ಆದರೆ ಈ ಭಾರಿ ಕೊರೋನಾ ವೈರಸ್ ಭೀತಿಯಿಂದ ದೇಶವನ್ನು ಲಾಕ್‌ಡೌನ್ ಮಾಡಲಾಗಿದ್ದು, ರಾಶಿ ಯಂತ್ರಗಳು ಬರದೆ ಇರುವುದರಿಂದ ರಾಶಿ ಯಂತ್ರಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ಗಂಟೆಗೆ ೧೮ ಸಾವಿರದಿಂದ ೨ ಸಾವಿರವರೆಗೆ ಪಡೆಯುತ್ತಿದ್ದವರು ಈ ಬಾರಿ ಗಂಟೆಗೆ  ೨೫೦೦ ರೂ ದರವನ್ನು ಏರಿಸಿದ್ದರಿಂದ ಕಟಾವು ಮಾಡಿದ ಖರ್ಚು ಸಹ ಬರುವುದಿಲ್ಲವೆಂದು ರೈತರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ವ್ಯಾಪಾರಸ್ಥರ ನಿರುತ್ಸಾಹ 
ಲಾಕ್‌ಡೌನ್‌ದಿಂದ ಸಿಂಧನೂರ, ಗಂಗಾವತಿ, ಕೊಪ್ಪಳ ಸೇರಿದಂತೆ ನೆರೆಯ ರಾಜ್ಯಗಳಿಗೆ ಸಾಗಾಣಿಕೆಯಾಗುತ್ತಿದ್ದ ಭತ್ತ ಲಾಕ್‌ಡೌನ್‌ನಿಂದ ರೈಸ್‌ಮಿಲ್‌ಗಳು ಬಂದ್ ಮಾಡಿರುವುದರಿಂದ ಸಾಗಾಣಿಕೆ ಮತ್ತು ಮಾರಾಟದ ಸಮಸ್ಯೆಯಿಂದ ವ್ಯಾಪಾರಸ್ಥರು  ಬೆಳೆ ಖರೀದಿಗೆ ನಿರುತ್ಸಾಹ ತೋರುತ್ತಿದ್ದಾರೆ. ಇನ್ನೂ ಕೆಲವು ವ್ಯಾಪಾರಸ್ಥರು ರೈತರ ಬೆಳೆಯನ್ನು ಖರೀದಿಸಿದರೂ ಕಡಿಮೆ ಬೆಲೆಗೆ ಖರೀದಿಸುತ್ತಿರುವುದರಿಂದ ಬೆಳೆದ ಬೆಲೆಗೆ ಸರಿಯಾದ ಬೆಲೆ ಸಿಗುತ್ತಿಲ್ಲವೆಂದು ಆರೋಪಿಸುತ್ತಿದ್ದಾರೆ. ಸದ್ಯಕ್ಕೆ ೭೦ ಕೆಜಿ ಚೀಲಕ್ಕೆ ೧೨೦೦ ರೂವರೆಗೆ ಖರೀದಿ ಮಾಡುತ್ತಿದ್ದು, ಕಟಾವು ಮಾಡಿದ ತಕ್ಷಣ ಖರೀದಿ ಮಾಡಿದರೆ ೧೧೦೦ ರೂ, ಎರಡು ಮೂರು ದಿನಗಳು ಆರಲು ಹರವು ಮಾಡಿದರೆ ೧೨೦೦ ರೂವರೆಗೆ ಖರೀದಿಸುತ್ತಿದ್ದಾರೆ. ಹರವು ಮಾಡಿ ಮಾರಾಟ ಮಾಡೋಣ ಎಂದರೆ ಮತ್ತೆ ವರುಣ ಕಾಡುತ್ತಾನೆ ಎಂಬ ಭೀತಿ ಕಾಡುತ್ತಿದ್ದು, ಬಂದ ಬೆಲೆಗೆ ತರಾತುರಿಯಲ್ಲಿ ಮಾರಾಟ ಮಾಡಲಾಗುತ್ತಿದೆ ಎನ್ನುತ್ತಾರೆ ರೈತರು.

ರೈತರ ಬೆಳೆದ ಬೆಲೆಗಳಿಗೆ ವ್ಯಾಪಾರಸ್ಥರು ಸಾಧಾರಣ ಬೆಲೆಯನ್ನು ನಿಗಧಿಪಡಿಸುತ್ತಿದ್ದು, ಈ ಬಗ್ಗೆ ಸರ್ಕಾರವೇ ಗಮನ ಹರಿಸಿ ಬೆಲೆಯನ್ನು ನಿಗಧಿಪಡಿಸಿ ರೈತರ ಬೆಳೆದ ಭತ್ತದ ಖರೀದಿಗೆ ಮುಂದಾಗಬೇಕು.
– ಬಸನಗೌಡ ಚಿಂಚೋಳಿ, ಜಿಲ್ಲಾಧ್ಯಕ್ಷ ರೈತ ಸಂಘ ಯಾದಗಿರಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss